|| ಹರಿ ಸ್ತುತಿ ||
ರಾಗ : ಕಾಂಬೋಧಿ
ತಾಳ : ಝಂಪೆತಾಳ
ಬಲು ರಮ್ಯವಾಗಿದೆ ಶ್ರೀ ಹರಿಯ ಮಂಚ
ಯಲರುಣಿ ಕುಲರಾಜ ರಾಜೇಶ್ವರನಮಂಚ||ಅ.ಪ||
ಪವನತನಯ ನೆನಿಪ ಪಾವನತರ ಮಂಚ |
ಭುವನತ್ರಯವ ಪೊತ್ತ ಭಾರೀ ಮಂಚ |
ಕಿವಿಗಳಿಲ್ಲದಮಂಚ ಶ್ರೀನಿಕೇತನಮಂಚ
ಶಿವರೂಪದಲಿ ಯೋಗ್ಯವಾದ ಶೇಷಮಂಚ
ಶ್ರೀಹರಿಯ ವಲಿಸಿದ ಮಂಚ ||೧||
ನೀಲಾಂಬರವನ್ನುಟ್ಟು ನಳನಳಿಸುವ ಮಂಚ |
ನಾಲಿಗೆ ಎರಡುಳ್ಳ ನೈಜಮಂಚ |
ನಾಲ್ವತ್ತು ಕಲ್ಪದಿ ತಪವ ಮಾಡಿದ ಮಂಚ |
ತಾಲಮುಸಲ ಹಲವ ಪಿಡಿದಿಹ ಮಂಚ ||೨||
ರಾಮನನುಜನಾಗಿ ರಣವ ಜಯಸಿದ ಮಂಚ|
ತಾಮಸ ರುದ್ರನ ಪಡೆದಮಂಚ |
ಭೀಮನನುಜನೊಳು ಆವೇಶಿಸಿದ ಮಂಚ |
ಜೀಮೂತ ಮಲ್ಲರನು ಕುಟ್ಟಿದ ಮಂಚ ||೩||
ಜೀವನಾಮಕನಾಗಿ ವ್ಯಾಪ್ತನಾದ ಹರಿಯ |
ಸೇವಿಸಿ ಸುಖಿಸುವ ದಿವ್ಯಮಂಚ |
ಸಾವಿರ ಮುಖದಿಂದ ತುತಿಸಿ ಹಿಗ್ಗುವ ಮಂಚ |
ದೇವಕಿಯ ಜಠರದಿ ಜನಿಸಿದ ಮಂಚ- ||೪||
ವಾರುಣಿದೇವಿಗೆ ವರನೆನಿಸಿದ ಮಂಚ |
ಸಾರುವ ಭಕ್ತರ ಪೊರೆವ ಮಂಚ |
ಕಾರುಣ್ಯನಿಧಿ ಜಗನ್ನಾಥ ವಿರಲನ |
ವಿಹಾರಕ್ಕೆ ಯೋಗ್ಯವಾದ ಶೇಷ ಮಂಚ ||೫||
0 ಕಾಮೆಂಟ್‌ಗಳು