ಬಾರಮ್ಮ ನಮ್ಮ ಮನೆಗೆ ಶ್ರೀ ಚಂದ್ರಲಾಂಬೆ - Baramma Namma Manege Sri Chandralambe

|| ಲಕ್ಷ್ಮಿ ಹಾಡು ||




ಬಾರಮ್ಮ ನಮ್ಮ ಮನೆಗೆ ಶ್ರೀ ಚಂದ್ರಲಾಂಬೆ

ಬಾರಮ್ಮ ನಮ್ಮ ಮನೆಗೆ ತೋರಮ್ಮ ನಿನ್ನ ದಯ

ನಾರಾಯಣನ ಸತಿಯೇ

ನೀ ನಾರಾಯಣನ ಸತಿಯೇ |ಪ|


ಜರದ ಪೀತಾಂಬರ ಸೀರೆಯನುಟ್ಟು

ಹಸಿರು ಜರದ ಕಚ್ಚುಕೆಯನೆ ತೊಟ್ಟು

ಕಮಲದಿ ಕುಳಿತವಳೆ ನೀ ಕಮಲದಿ ಕುಳಿತವಳೆ||೧||


ಅರಸಿನ ಕುಂಕುಮ ಅರಳು

ಮಲ್ಲಿಗೆದವನ ಹಲಸು ಮಾವಿನ

ಹಣ್ಣು ತೆಂಗಿನ ಫಲಗಳು ಪೂಜಿಸುವೆನು

ನಿನ್ನ ನಾ ಪೂಜಿಸುವೆನು ನಿನ್ನ ||೨||


ಏಸು ದಿನಗಳಿಂದ ಆಸೆಯಿಂದಲ್ಲಿ ನಲಿವ

ಸನ್ನತಿ ಪುರವಾಸಿ ಭೀಮಾ ತೀರದೊಳ್ ನಿಂತ

ಕೊಪ್ಪರ ನರಸಿಂಹನ ಅರಸಿಯೇ ನೀ

ಕೊಪ್ಪರ ನರಸಿಂಹನ ಅರಸಿಯೇ||೩||

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು