|| ಶಿವನಿಗೆ ಆರತಿ ಹಾಡು ||
ಬೆಳಗುವೆ ನಾ ಆರತಿಯ ಆ ಶಿವನಿಗೆ
ಕಾಶಿಯ ವಿಶ್ವನಾಥನಿಗೆ ||ಪ||
ಪಾರ್ವತಿ ರಮಣಗೆ | ಸುಂದರ ರೂಪಗೆ |
ಕೈಲಾಸ ವಾಸಗೆ | ನಂದಿ ವಾಹನಗೆ ||೧||
ತ್ರಿಶೂಲ ಧಾರಿಗೆ | ತ್ರಿನೇತ್ರನಿಗೆ |
ಗಂಗೆಯ ಧರಿಸಿದ | ಗಂಗಾಧರನಿಗೆ ||೨||
ನಾಗಭರಣಗೆ | ನಟರಾಜನಿಗೆ |
ಗೌರಿ ಪ್ರಿಯನಾದ | ಅರ್ಧನಾರೀಶ್ವರಗೆ ||೩||
0 ಕಾಮೆಂಟ್‌ಗಳು