ಬೆಳಗುವೆ ನಾ ಮಂಗಳ ಆರತಿಯ
ಬೆಳಗುವೆ ನಾ ಆರತಿ ಮಂಗಳ ಮೂರುತಿ
ಗೌರಿ ನಂದನ ವರ ಗಣಪತಿಗೆ ||ಪ||
ಸರ್ವಲೋಕದೋಳೀತ ಸರ್ವಕಾಲದಲೀತ
ಸರ್ವರಿಂದಲೇ ತಾನು ಘನ ಪೂಜಿತಾ
ಸರ್ವ ಕಾರ್ಯದಲ್ಲಿ ಮಂಗಳವೀಯುವ
ವಿಜ್ಞ ನಾಶಕ ಶ್ರೀ ಸರ್ವೋತ್ತಮಗೆ ||೧||
ತನ್ನನ್ನು ಕಾಣುತ್ತ ಹಾಸ್ಯವ ಮಾಡಿದ
ನಗೆಮುಖ ಚಂದ್ರನಿಗೆ ಶಾಪವಿತ್ತು
ಅನುದಿನ ಚೌತಿಯಲಿ ಚಂದ್ರನ ದರ್ಶನ
ದೋಷವೆಂದರುಹಿದ ವಿಘ್ನೇಶಗೆ ||೨||
ಜಯ ಜಯ ಮಂಗಳ ಮೂಷಕವಾಹನ
ಜಯ ಜಯ ಶಂಕರ ಹರ ನಂದನ
ಜಯ ಸಿದ್ಧಿವಿನಾಯಕ ಅಭಯ ಪ್ರದಾಯಕ
ಗಂಗೆಯ ವರದಾತ ವಿಘ್ನೇಶಗೆ ||೩||
0 ಕಾಮೆಂಟ್‌ಗಳು