|| ಜಾನಪದ ಶೈಲಿ ಭಜನೆ ||
ಜಕ್ಕಣಕ್ಕ ಣಕ್ಕ ಜಕ್ಕ ಜಕ್ಕಣಕ್ಕ ಣಕ್ಕ ಜಕ್ಕ ||
ಬಿಳಿಯ ಕುದುರೆ ಏರಿಕೊಂಡು |
ಬಿಲ್ಲು ಬಾಣ ಹೂಡಿಕೊಂಡು 1
ಹುಲಿಬೇಟೆಗೊರಟ ಭೂಪ ಬಾಣಶೂರ - 2 |
ಮಾಯಗಾರ, ಮಾಗಡಿಯ ರಂಗನಾಥ ಬೇಟೆಗಾರ||ಜಕ್ಕ||
ಮಾದೇಸ್ವಾಮಿ ಬರುವಾಗ|ಮಾಡೆಲ್ಲ ಘಮ್ಮೆಂದು ।
ಹುಲ್ಲೆಕರು ಹುಲಿಮರಿ ಜೊತೆಯಾಗಿ - 2 |
ಎದ್ದು ಬಾರೆ, ಮಾದೈನ ಪುರಕೆ ಹಸನಾಗು
ಮುತ್ತಿನ ಗೆಜ್ಜೆ ಬಿಟ್ಟು ಬಾರೆ | ಚಂದಗಾತಿ ಚಾಮುಂಡಿ
ಘಮನಾದ ಜಾಜಿ ಮೊಗ್ಗು ಅರಳ್ಳಾವೆ - 2 |
ಚಾಮುಂಡಿ, ಸುತ್ತಾಲು ಬೆರೆಸಿ ಮೆರೆದಾವೆ ||ಜಕ್ಕ||
ಕಾಲಿನ ಗೆಜ್ಜೆ ಘಲಿರೆಂದು ಮುತ್ತಿನ ಬಳೆ ಭಳಿರೆಂದು|
ಗಮ್ಯಾದ ಘಮ ಘಮ ಘಮ್ಮೆಂದು - 2 |
ಜಗಕೆಲ್ಲಾ, ಕಂಪಾದ ವಾಸನೆ ತುಂಬಿತ್ತು - ||ಜಕ್ಕ||
0 ಕಾಮೆಂಟ್‌ಗಳು