|| ಶಿವ ಭಜನೆ ||
ರಾಗ: ಅಮೃತ ವರ್ಷಿಣಿ
ತ್ರಿಪುಟತಾಳ
ಈಶ್ವರ ಪರಮೇಶ್ವರ||ಪ ||
ಶಂಕರ ಅಮರೇಶ್ವರ ||ಅ.ಪ.||
ಸೇವೆಗೆ ಬಂದೆವು ನಿನ್ನಾಲಯಕೆ
ಪಾವನ ಮೂರುತಿ ನಮಿಪೆವು ಪಾದಕೆ
ನೀನೇ ಗತಿಮತಿ ನೀಡು ಸನ್ಮತಿ
ನಿನ್ನಯ ಪಾದವೇ ನಿಮಗೆ ಗತಿ ||೧||
ಕಾಲಕಂಠೇಶ್ವರ ನಾಟ್ಯಮನೋಹರ
ವಾಮದೇವೇಶ್ವರ ಜಗದೀಶ್ವರ
ತ್ರಿಜಟೇಶ್ವರ ತ್ರಿಶೂಲೇಶ್ವರ
ತ್ರಿಜಗ ವಂದಿತ ಭವಾನಿ ಶಂಕರ ||೨||
ಪಾರ್ವತಿ ಪ್ರಿಯಕರ ಹೇ ಸೋಮೇಶ್ವರ
ಉಮಾ ಮಹೇಶ್ವರ ಶಿವ ಶಂಕರ
ಸುಮನೋಹರ ಅಮೃತೇಶ್ವರ
ಶಾರದೇನುತ ಕೋಟಿ ||೩||
0 ಕಾಮೆಂಟ್‌ಗಳು