ಎಂದಿಗಾಹುದೋ ನಿನ್ನ ದರುಶನ - Endigahudo Ninna Darushana

|| ಗೋವಿಂದ ಸ್ತುತಿ || 





ಎಂದಿಗಾಹುದೋ ನಿನ್ನ ದರುಶನ |

ಅಂದಿಗಲ್ಲದೆ ಬಂಧ ನೀಗದೋ ||ಪ||


ಗಾನಲೋಲಶ್ರೀ ವತ್ಸಲಾಂಚನ |

ದಾನವಾಂತಕ ದೀನ ರಕ್ಷಕ |l೧ll


ಆರಿಗೆ ಮೊರೆ ಇಡಿ ದೇವನೆ

ಸಾರಿ ಬಂದು ನೀ ಕಾಯೋ ಬೇಗನೆ ||೨||


ಗಜವ ಪೊರೆದೆಯೋ ಗರುಡ ಗಮನನೆ |

ತ್ರಿಜಗ ಭರಿತ ಶ್ರೀ ವಿಜಯವಿಠಲ ||೩||

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು