|| ವೆಂಕಟರಮಣ ಸ್ತುತಿ ||
ಗರುಡ ಗಮನ ಬಂದನೋ ನೋಡಿರೋ ಬೇಗ
ಗರುಡ ಗಮನ ಬಂದನೋ ||ಪ||
ಗರುಡ ಗಮನ ಬಂದ ಧರಣಿಯಿಂದೊಪ್ಪುತ |
ಕರೆದು ಬಾರೆನ್ನುತ ವರಗಳ ಬೀರುತ ||ಅ.ಪ.||
ಎನ್ನ ರಕ್ಷಿಪ ದೊರೆ ಇಲ್ಲಿಗೆ ತಾ ಬಂದ |
ಚಿನ್ನವ ಪೋಲುವ ವಿಹಂಗದ ರಥದಲ್ಲಿ |
ಘನ್ನ ಮಹಿಮ ಬಂದ ಅಬಿನ್ನ ಮೂರುತಿ ಬಂದ |
ಸಣ್ಣ ಕೃಷ್ಣ ಬಂದಾಬೆಣ್ಣೆ ಕಳ್ಳಬಂದ II೧II
ಪಕ್ಷಿವಾಹನ ಬಂದ ಲಕ್ಷ್ಮೀಪತಿಯು ಬಂದ
ಕುಕ್ಷಿಯೊಳಗಜಗವ ಇಟ್ಟವತಾಬಂದ |
ಸೂಕ್ಷ್ಮಸೂಲದೊಳುಇಪ್ಪನು ತಾ ಬಂದ |
ಸಾಕ್ಷಿಭೂತ ಅವ ಸತ್ಯೇಶ್ವರಬಂದ ||೨||
ತಂದೆ ಪುರಂದರವಿಠಲ ರಾಯಬಂದ |
ಬಂದು ನಿಂದುನಲಿದಾಡಿದನೋ |
ಸಿಂಧುಶಯನಬಂದ ಅಂದು ಸಾಂದೀಪನ |
ನಂದನ ತಂದಿತ್ತ ಆನಂದ ಮೂರುತಿ ಬಂದ ||೩||
0 ಕಾಮೆಂಟ್‌ಗಳು