ವಿಘ್ನೇಶ್ವರನಿಗೆ ಸಿದ್ಧಿದಾಯಕನಿಗೆ - Vighneshwaranige Siddhidayakanige

ಗಣೇಶನಿಗೆ ಆರತಿ ಹಾಡು 





ವಿಘ್ನೇಶ್ವರನಿಗೆ ಸಿದ್ಧಿದಾಯಕನಿಗೆ

ವಿದ್ಯೆಗಳನೆಲ್ಲಾ ಕೊಡುವನಿಗೆ

ಮುದ್ದು ಮುಖದ ಶ್ರೀ ಸೊಂಡಿಲ ಗಣಪಗೆ

ವಜ್ರಮಾಣಿಕ್ಯಾದಾರತಿ ಎತ್ತಿರೇ

ಗಜಮುಖನಿಗೆ ಗಣಪನಿಗೆ

ಚೆಲ್ವ ಗಜಗಮನೆಯರಾರತಿ ಎತ್ತಿರೇ


ಮೂಷಿಕವಾಹನ ಪಾಶಾಂಕುಶನಿಗೆ

ಕೇಶವನೆಲ್ಲಾ ಕಳೆವಾನಿಗೆ

ದೇಶವಿದೇಶದಿ ಪೂಜೆಗೊಂಬುವನಿಗೆ

ಜಾತಿ ಮಾಣಿಕ್ಯಾದಾರತಿ ಎತ್ತಿರೇ


ನಂದಿವಾಹನನಿಗೆ ನಾಗಭೂಷಣನಿಗೆ

ಚಂದ್ರಗೆ ಶಾಪವನಿತ್ತವಗೆ

ನಂಜುಂಡೇಶನ ಕುಮಾರನಿವನಿಗೆ

ಮುತ್ತು ಮಾಣಿಕ್ಯಾದಾರತಿ ಎತ್ತಿರೇ

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು