|| ಶಿವನಿಗೆ ಆರತಿ ಹಾಡು ||
ಎತ್ತಿದಳಾರತಿಯ ಪಾರ್ವತಿ ದೇವಿಯು
ಬೆಳಗಿದಳಾರತಿಯ ||ಪ||
ನಂದಿವಾಹನನಾದ ಚಂದ್ರಶೇಖರನಾದ
ಶಿವ ಎಂದೆಂದಿಗೂ ತನ್ನ ಪತಿಯಾಗಬೇಕೆಂದು ||೧||
ಹಾವನ್ನು ಕೊರಳೊಳು ಹಾಕಿಕೊಂಡಿರುವಂಥ
ಸಾವಿಲ್ಲದೀಶ್ವರ ತನ್ನ ಪತಿಯಾಗಬೇಕೆಂದು ||೨||
ನಾಲ್ಕು ವೇದಗಳಿಂದ ವರ್ಣಿಸಿ ಕೊಳುವಂಥ
ಸುಂದರ ಶಿವ ತನ್ನ ಪತಿಯಾಗಬೇಕೆಂದು ||೩||
0 ಕಾಮೆಂಟ್ಗಳು