|| ರಾಘವೇಂದ್ರ ಸ್ತುತಿ ||
ತುಂಗಾತೀರದಿ ನಿಂತ ಸುಯತಿವರನ್ಯಾರೇ ಪೇಳಮ್ಮಯ್ಯ
ಸಂಗೀತಪ್ರಿಯ ಮಂಗಳಸುಗುಣಿ ತರಂಗ
ಮುನಿಕುಲೋತ್ತುಂಗ ಪೇಳಮ್ಮ
ಚಲುವ ಸುಮುಖ ಫಣಿಯಲ್ಲಿ
ತಿಲಕ ನಾಮಗಳು ಪೇಳಮ್ಮಯ್ಯ
ಜಲಜಮಣಿಯು ಕೊರಳೊಳು
ತುಳಸಿಮಾಲೆಗಳು ಪೇಳಮ್ಮಯ್ಯ
ಸುಲಲಿತಕಮಂಡಲ ದಂಡವನ್ನೆ
ಧರಿಸಿಹನು ಪೇಳಮ್ಮಯ್ಯ
ಖುಲ್ಲ ಹಿರಣ್ಯಕನಲ್ಲಿ ಜನಿಸಿದ
ಪ್ರಹ್ಲಾದನು ತಾನಿಲ್ಲಿಹನಮ್ಮ || ೧ ||
ಸುಂದರ ಚರಣಾರವಿಂದ
ಸುಭಕುತಿಯಲಿಂದ ಪೇಳಮ್ಮಯ್ಯ
ವಂದಿಸಿ ಸ್ತುತಿಸುವ ಭೂಸುರರಿಂದ ಪೇಳಮ್ಮಯ್ಯ
ಚಂದದಿಲಂಕೃತಿಯಿಂದ ಶೋಭಿಸುವ
ಆನಂದ ಪೇಳಮ್ಮಯ್ಯ
ಹಿಂದೆ ವ್ಯಾಸಮುನಿಯೆಂದೆನಿಸಿದ
ಕರ್ಮಂದಿಗಳರಸಘದಿಂದ ರಹಿತನೆ || ೨ ||
ಅಭಿನವ ಜನಾರ್ಧನ ವಿಠ್ಠಲನ ಧ್ಯಾನಿಸುವ ಪೇಳಮ್ಮಯ್ಯ
ಅಭಿವಂದಿತರಿಗೆ ಅಖಿಲಾರ್ಥಗಳ ಸಲ್ಲಿಸುವ ಪೇಳಮ್ಮಯ್ಯ
ನಭಮಣಿಯಂದದಿ ಭೂಮಿಯಲ್ಲಿ ರಾಜಿಸುವ ಪೇಳಮ್ಮಯ್ಯ
ಶುಭಗುಣನಿಧಿ ಶ್ರೀ ರಾಘವೇಂದ್ರಯತಿ ಅಬುಜ
ಭವಾಂಡದೊಳು ಪ್ರಬಲ ಕಾಣಮ್ಮ || ೩ ||
0 ಕಾಮೆಂಟ್‌ಗಳು