ಗಣಪತಿಗೆ ಆರತಿ ಹಾಡು - ಗಜಮುಖದವಗೆ ಗಣಪಗೆ, Gajamukhadavage Ganapage

|| ಗಣಪತಿಗೆ ಆರತಿ ಹಾಡು ||


 




ಗಜಮುಖದವಗೆ ಗಣಪಗೆ - ಚೆಲ್ವ 

 ಜಂಗ ವಂದಿತಗಾರತಿ ಎತ್ತಿರೇ ||


ಗಂಗೆಗೌರಿ ಪುತ್ರ ಲಂಬೋದರನಿಗೆ

ಚಂದ್ರಗೆ ಶಾಪವನಿತ್ತವರ |

ನಂಜನಗೂಡಲ್ಲಿ ನೆಲೆಯಾಗಿ ನೆಲೆಸಿರುವ

ನಂಜುಂಡೇಶ್ವರನಾ ವರಪುತ್ರಗೇ ||


ಮೂಷಕವಾಹನ ಮೋದಕಪ್ರಿಯನಿಗೆ

ದೇಶವನ್ನೆಲ್ಲಾ ಸಲಹುವರೇ |

ಈಶ್ವರನಾಪುತ್ರ ಪಾಶಾಂಕುಶನಿಗೆ

ಜಾತಿಮಾಣಿಕದಾರತಿ ಎತ್ತಿರೇ ||


ಸಿದ್ಧಿದಾಯಕನಿಗೆ ಬುದ್ಧಿಪ್ರದಾಯಕಗೆ

ವಿದ್ಯೆಗಳೆಲ್ಲವ ಕೊಡುವವಗೆ |

ಮುದ್ದು ಮುಖದ ಶ್ರೀ ಸೊಂಡಿಲ ಗಣಪಗೆ

ವಜ್ರ ಮಾಣಿಕದಾರತಿ ಎತ್ತಿರೇ ||

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು