ಗಣಪತಿಗೆ ಆರತಿ ಹಾಡು - ಕಾವ ದೇವನ ಪದಕೆ, Kaava Devana Padake

|| ಗಣಪತಿಗೆ ಆರತಿ ಹಾಡು ||






ಕಾವ ದೇವನ ಪದಕೆ ಭಕ್ತಿ ಭಾವದೊಳೆರಗಿ

ನಿತ್ಯ ಮಂಗಳ ಮೂರ್ತಿ ಸಿರಿ ಗಣಪತಿ

ಆರೇಳು ಲೋಕಗಳ ಮೊದಲ ಪೂಜೆಯು ನಿನಗೆ

ಕೂಡಿ ಬೆಳಗುವ ಬನ್ನಿ ಪಂಚಾರತಿ


 ಮಲ್ಲೆ ಮಲ್ಲಿಗೆ ಜಾಜಿ ಬಕುಳ ಚಂಪಕ ರಾಜಿ

 ನೀರ ನೀರಜ ತುಂಬೆ ಅಡಿಗೆ ಚೆಲ್ಲಿ

 ಮಂತ್ರ ಮೋಹನ ಗಾನ ನಿನ್ನ ಸಾಸಿರ ನಾಮ

 ಕೂಡಿ ಬೆಳಗುವ ಪಂಚಾರತಿ


ಇಲಿ ಬೆದರಿ ಧರೆಗುರುಳೆ ಚಂದ್ರ ಶಾಪವನಿತ್ತ

ಒಡಲಿಗ್  ಉರುಗನ ಬಿಗಿದ ಭಾವ ಭಂಗಿ

ವಿಮಲ ವಸ್ತ್ರಾಭರಣ ಗಿರಿಜೆಯೊಲವಿನ ಕುವರ

ಕೂಡಿ ಬೆಳಗುವ ಬನ್ನಿ ಪಂಚಾರತಿ


ಸತ್ಯಗಣಪತಿ ದೇವ ಗಣಗಳೊಡೆಯ ಗಣೇಶ

ಭಕ್ತೋದ್ಧಾರ ಗೈವೆ ಕೀರ್ತಿ

ಪರಮ ಪಾವನ ನಾಮ ನಿನ್ನ ನಾಮಸ್ಮರಣೆ

ಕೂಡಿ ಬೆಳಗುವ ಬನ್ನಿ ಪಂಚಾರತಿ


ನಮಿಸಿ ಪೂಜಿಸಿ ಕಾಡಿ ನಿನ್ನ ಕರುಣೆಯ ಬಿಕ್ಷೆ

ಸೆರಗೊಡ್ಡಿ ಬೇಡುವೆ ನಾ ಹೇ ದಯಾಳುವೇ

ಪರಮ ಪಾವನ ನಾಮ ನಿನ್ನ ನಾಮಸ್ಮರಣೆ

ಕೂಡಿ ಬೆಳಗುವ ಬನ್ನಿ ಪಂಚಾರತಿ






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು