|| ಗಣಪತಿ ಸ್ತುತಿ ||
ಗಿರಿಯ ಮ್ಯಾಗಿರುವಂತ ಪರಶಿವ್ನ ಸತಿಯಾದ
ಗಿರಿಜೆಯ ಮಗನಾದ ಗಣಪನ...
ಗಿರಿಜೆಯ ಮಗನಾದ ಗಣಪನ ನೆನೆದೊಮ್ಮೆ
ಶಿರಬಾಗಿ ಕರವ ಮುಗಿಯೋಣ ||ಪ ||
ನೆನೆದೋರ ಮನದಾಗೆ ಮನೆಮಾಡೋ ಗಣಪನ
ನೆನೆದ ಕಾರ್ಯಾದಾಗೆ ವಿಜಯವಾ||ಕೊಡುವಂತ
ಆನೆ ಮುಖದೋನ ನೆನೆಯೋಣ ||1||
ಇಲಿಯ ಮ್ಯಾಗೆ ಕೂತು ಇಳೆಯನೆಲ್ಲ ಸುತ್ತೋ
ಎಳೆ ಪ್ರಾಯದವನ ಕರೆಯೋಣ||ಭಾರವ
ಇಳಿಸೆಂದು ನಾವು ಬೇಡೋಣ ||2||
ಕರಿಗಡುಬು ಕಾಯ್ದಡುಬು ಸಕ್ಕರೆ ಪಾಯಸ ||
ಕರಿ ಮುಖದವನಿಗೆ ನೀಡೋಣ||ಸಂಕಟವ
ಪರಿಹರಿಸೆಂದು ಕೈಯ ಮುಗಿಯೋಣ ||3||
ಸಿದ್ಧಿ ವಿನಾಯಕನ ಸಿರಿ ಪಾದ ಕಮಲವ
ಶುದ್ಧರಾಗಿ ಪೂಜೆ ಮಾಡೋಣ||ವಿದ್ಯೆಯ
ಬುದ್ದಿಯ ನೀಡೆಂದು ನಮಿಸೋಣ ||4||
0 ಕಾಮೆಂಟ್‌ಗಳು