|| ದುರ್ಗಾ ಸ್ತುತಿ ||
ದುರ್ಗೆ ಪಾಲಿಸೆ ಮಾತೆ|
ನಂಬಿದೆ ಬ್ರಹ್ಮಬರ್ಗಾದಿ ಸುರವಿನುತೆ||ಪ||
ದುರ್ಗಮ ಭವದಿಂದ,ನಿರ್ಗಮಗೈಸು ಹೇ ಭಾರ್ಗವಿ,
ಸ್ವರ್ಗಾಪವರ್ಗ ಪ್ರದಾತೆ ||ಅ.ಪ||
ಅಂಬರ ಭೂಮಿ ವಿಹಾರಿ,
ಅಷ್ಟಾಯುಧ ದಿವ್ಯಾಂಬರಧಾರಿ ಅಸುರಾರಿ |
ನಂಬಿದೆ ನಿನ್ನ ಪಾದಾಂಬುಜ ಎನ್ನ
ಹೃದಯಾಂಬರದಲ್ಲಿಹ ಬಿಂಬವ ತೋರಿಸು ಎಂಬೆ|
ಸುನಿತಂಬೆ ಜಗದಂಬೆ ಶುಭಗುಣ ನಿಖರಂಬೆ||೧||
ನಂದಗೋಪನ ಕುಮಾರಿ,
ನರಸಿಂಹಾಕ ಮಂದಿರೆ ಸುಜನೋದ್ದಾರಿ ||
ಇಂದಿರೆ ಎನ್ನಯ ಇಂದ್ರಿಯ ಮನಸ್ಸು
ಮುಕುಂದನ ಪದದಲ್ಲಿ ತಂದು ನಿಲ್ಲಿಸು
ಎಂದೆ ಎನ್ನ ತಂದೆ ಇನ್ನು ಮುಂದೆ ನೀನೆ ಗತಿ ಎಂದೆ||೨||
ಸಿರಿನರಸಿಂಹನ ರಾಣಿ|ವರನೀಲವೇಣಿ ಪರಮ ಕಲ್ಯಾಣಿ|
ಗುರುಶ್ರೇಣಿ | ಪರತರ ಗುರು ಗೋಪಾಲವಿಠಲನ
ಚರಣ ಕಮಲದಲ್ಲಿ ಸ್ಥಿರವಾದ ಭಕುತಿಯ ನೀಡೆ |
ನಿನಗೀಡೆ ನಲಿದಾಡೆ ದಯಮಾಡಿ ನೋಡೆ||೩||
0 ಕಾಮೆಂಟ್‌ಗಳು