|| ಹನುಮ ಸ್ತುತಿ ||
kannadabhajanlyrics.blogspot.com, belaguru Swamiji images |
ಹೊತ್ತು ಸುಮ್ಮನೆ ಕಳೆದು ಹೋಯಿತಲ್ಲೋ ಹನುಮಾ
ಚಿತ್ತ ಶುದ್ಧಿಯು ಇರದೇ|ವ್ಯರ್ಥವಾಯಿತೊ ಹನುಮಾ||ಪ||
ತುತ್ತು ಅನ್ನವ ತಿನ್ನುವಾಗ|ಮಾತು ಸುಮ್ಮನಾಡುವಾಗ|
ಗತ್ತಿನಿಂದಲೆ ತಲೆ ಎತ್ತಿ ನಡೆವಾಗ |
ಗೊತ್ತಾಗಲಿಲ್ಲೆನಗೆ ಸತ್ಸಂಗದಾ ಮಹಿಮೆ |
ಚಿತ್ತದೊಳು ತುಂಬಿರದೆ | ಅರ್ಥವಿಲ್ಲದೆ ಹೊಯ್ತುII೧II
ಪ್ರೀತಿವ್ಯಾಮೋಹ ಮುಸುಕೀ|ಮನವೆಲ್ಲಾ ಕಲಕೀ |
ಸತಿ ಸುತರ ಮಾಯಯಾ | ಬಂಧನಕೆ ಸಿಲುಕೀ ||
ವಿದಾಸೆಯ ಗಿರಿಯ ಹತ್ತಿಹೋಗುವ ಮುನ್ನ |
ಉತ್ತಮೋತ್ತಮ ನಿನ್ನ ನೆನಯಲಿಲ್ಲ ಜೀಯII೨II
ದೇವ ಮನ್ನಿಸಿ ಕಾಯೊ ಮಾಡಿರುವ ಅಪರಾಧ |
ಪವನ ಸುತ ಕೈ ಹಿಡಿದು ಎತ್ತು ನಮ್ಮ |
ಅವನಿಯೊಳು ಅತಿಕಾಲ, ನಿನ್ನ ನಾಮ ನುಡಿವಂತೆ |
ನವ ಬ್ರಹ್ಮ ವರವೀಯೊ|ಜಯವೀರ ಹನುಮಾ||೩||
0 ಕಾಮೆಂಟ್‌ಗಳು