|| ಗಣಪತಿ ಸ್ತುತಿ ||
ಗಜಮುಖನೆ ಬುದ್ದಿದಾತನೇ ಸಿದ್ಧಿನಾಥನೇ
ಸಲಹು ಗಣೇಶನೇ...ವಿದ್ಯಾಧಿಪನೆ...
ನೀ ನಮ್ಮ ಗೆಲುವಾಗಿ ಬಾ ಗಜಮುಖನೆ
ನೀ ನಮ್ಮ ಗೆಲುವಾಗಿ ಬಾ ||ಪ||
ಗುರುಕುಲಕೆ ವರವಾಗಿ ಗುರಿ ತೋರೊ ಗುರುವಾಗಿ
ಪೊರೆ ನೀನು ಎಂದೆಂದು ಕರುಣಾಳು ಬಾ||ಅ.ಪ||
ಬಾಳಲ್ಲಿ ಒಂದಾಗಿ ಬಾ ನಮ್ಮ ಜೊತೆಯಾಗಿ
ಕ್ಷಣ ಕ್ಷಣವು ನಮಗಾಗಿ ನೆರವಾಗು ಬೆಳಕಾಗಿ
ದಯೆ ಇರಲಿ ನಮ್ಮಲ್ಲಿ ಗತಿ ನೀನೆ ಆದಿಯಲಿ ||೧||
ನಿಧಿಯಾಗಿ ವಿಧಿಯಾಗಿ ಸುಧೆ ತುಂಬು ಒಲವಾಗಿ
ಹಿರಿಯಾದ ಸಿರಿ ನೀನು ಈ ಬಾಳ ಸವಿಜೇನು
ದಯೆ ಇರಲಿ ನಮ್ಮಲ್ಲಿ ಗತಿ ನೀನೇ ಆದಿಯಲಿ||೨||
ನೀ ನಮ್ಮ ಗೆಲುವಾಗಿ ಬಾ ಗಜಮುಖನೆ
ನೀ ನಮ್ಮ ಗೆಲುವಾಗಿ ಬಾ
0 ಕಾಮೆಂಟ್‌ಗಳು