ಶಿವ ಶಿವ ಶಿವ ಎನ್ನಿರೊ - Shiva Shiva Shiva Enniro

 || ಶಿವಸ್ತುತಿ  ||

 ರಚನೆ : ಕನಕದಾಸರು




ಶಿವ ಶಿವ ಶಿವ ಎನ್ನಿರೊ – ಮೂಜಗದವರೆಲ್ಲ

ಶಿವ ಶಿವ ಶಿವ ಎನ್ನಿರೊll

ಆಗಮ ಸಿದ್ಧಾಂತ ಮೂಲದ ಜಪವಿದು

ಶಿವಶಿವಶಿವ ನಿಮ್ಮರೋಗದ ಮೂಲವ ಕೆಡಿಪ

ಔಷಧವಿದು ಶಿವಶಿವಶಿವ ಎನ್ನಿರೊ ||ಪ||


ಮನುಜ ಜನ್ಮದಿ ಮೈಮರೆದಿರಬೇಡಿ ಶಿವಶಿವಶಿವ

ತನುಮನ ಪ್ರಾಣವ ವ್ಯರ್ಥವ ಮಾಡದೆ

ಶಿವಶಿವಶಿವ ಅಪರಾಧದಕೋಟಿ ತ್ಯಜಿಸಬೇಕಾದರೆ

ಶಿವಶಿವಶಿವ ಮುಂದೆ ಉಪಮಿತರೋರ್ಮಿತರರಿಯದ

ಜಪವಿದು ಶಿವಶಿವಶಿವ ಎನ್ನಿರೊll೧||


ಜವನ ಬಾಧೆಯ ನೀವು ಜಯಿಸಬೇಕಾದರೆ

ಶಿವಶಿವಶಿವ ಸುವಿಮಲ ಮುಕ್ತಿಯ

ಪಡೆಯಬೇಕಾದರೆ ಶಿವಶಿವಶಿವ

ಭುವನಕೆ ಬಲ್ಲಿದರಾಗಬೇಕಾದರೆ ಶಿವಶಿವಶಿವ

ಭವನ ಪದವಿಯನು ಪಡೆಯಬೇಕಾದರೆ

ಶಿವಶಿವಶಿವ ಎನ್ನಿರೊ ||೨||


ಗುರುಲಿಂಗ ಜಂಗಮವ ಅರಿಯಬೇಕಾದರೆ ಶಿವಶಿವಶಿವ

ಪರಮಾತ್ಮನ ನೀವು ತಿಳಿಯಬೇಕಾದರೆ ಶಿವಶಿವಶಿವ

ಪೃಥ್ವಿಗೆ ಸದ್ಗುರುವಾಗಬೇಕಾದರೆ ಶಿವಶಿವಶಿವ

ಆದಿಕೇಶವನ ಕೂಡಬೇಕಾದರೆ

ಶಿವಶಿವಶಿವ ಎನ್ನಿರೊ ||೩||





ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು