|| ಜಾನಪದ ಶೈಲಿಯ ಭಜನೆ ||
ನಿಂಬಿಯಾ ಬನಾದ ಮ್ಯಾಗಳ
ಚಂದ್ರಾಮ ಚೆಂಡಾಡಿದ |
ಎದ್ದೋನೇ ನಿಮಗ್ಯಾನ ಏಳುತಲಿ ನಿಮಗ್ಯಾನ
ಸಿದ್ಧಾರ ಗ್ಯಾನ ಶಿವೂ ಗ್ಯಾನ
ಸಿದ್ದಾರ ಗ್ಯಾನ ಶಿವೂ ಗ್ಯಾನ ಮಾ ಶಿವನೆ
ನಿದ್ರೆಗಣ್ಣಾಗೆ ನಿಮಗ್ಯಾನ || ನಿಂಬಿಯಾ ||
ಆರೇಳ ಮಾವೀನ ಬೇರಾಗಿ ಇರುವೋಳೆ
ಓಲ್ಗಾದ ಸದ್ದಿಗೆ ಒದಗೋಳೆ
ಓಲ್ಲಾದ ಸದ್ದಿಗೆ ಒದಗೊಳೇ ಸರಸತಿಯೆ
ನಮ್ ನಾಲಿಗೆ ತೊಡಿರ ಬಿಡಿಸವ್ವಾ IIನಿಂಬಿಯಾ||
ಎಂಟೆಲೆ ಮಾವಿನ ದಂಟಾಗಿ ಇರುವೂಳೆ
ಗಂಟೆ ಸದ್ದಿಗೆ ಒದಗೋಳೆ
ಗಂಟೆ ಸದ್ದಿಗೆ ಒದಗೋಳೆ ಸರಸತಿಯೆ
ನಮ್ ಗಂಟಾಲ ತೊಡರ ಬಿಡಿಸವ್ವಾ ||ನಿಂಬಿಯಾ||
ರಾಗಿ ಬೀಸೋಕಲ್ಲೆ ರಾಜಾನ ಒಡಿಗಲ್ಲೆ
ರಾಯ ಅಣ್ಣಯ್ಯ ಅರಮನೆ
ರಾಯ ಅಣ್ಣಯ್ನ ಅರಮನೆಯ ಈ ಕಲ್ಲೆ
ನೀ ರಾಜಾ ಬೀದೀಲಿ ದನಿದೋರೆ ||ನಿಂಬಿಯಾ||
ಕಲ್ಲವ್ವಾ ಮಾತಾಯಿ ಮಲ್ಲವ್ವಾ ರಾಗೀಯ
ಜಲ್ಲಾ ಜಲ್ಲಾನೆ ಉದುರವ್ವ
ಜಲ್ಲಾ ಜಲಾನೆ ಉದುರವ್ವ, ನಾ ನಿನಗೆ
ಬೆಲ್ಲಾದಾರತಿಯ ಬೆಳಗೇನು ||ನಿಂಬಿಯಾ||
0 ಕಾಮೆಂಟ್‌ಗಳು