ಪಂಪಾಪುರ ನಿವಾಸ ಪ್ರಮಥರೇಶ - Pampapura Nivasa Pramatharatharesha

|| ಶಿವಸ್ತುತಿ ||

ರಾಗ : ಕಾಂಬೋಧಿ

ತಾಳ : ಝಂಪೆತಾಳ




ಪಂಪಾಪುರ ನಿವಾಸ ಪ್ರಮಥರೇಶ ||ಪಲ್ಲವಿ||

ತ್ವಂಪಾಹಿ ಪಾಹಿ ತ್ರಿಪುರಾರಿ ತ್ರಿನೇತ್ರ ||ಅ.ಪ||


ಕೈಲಾಸ ಸದ್ಮಚಿತ ಚೈಲಭೂಷಣ ಮನೋ |

ಮೈಲಿಗೆಯ ಪರಿಹರಿಸೋ ನೀಲಕಂಠ |

ಕಾಲಕಾಲಗಳಲ್ಲಿ ಕಾಲನಿಯಾಮಕನ |

ಲೀಲೆಗಳ ತುತಿಪ ಸುಖ ನಾಲಿಗೆಗೆ ಕೊಡು ಸತತ||೧||


ಪಾರ್ವತೀರಮಣ ನೀ ಮೋಹ ಶಾಸ್ತ್ರವ ರಚಿಸಿ|

ಶಾರ್ವರೀಚರರ ಮೋಹಿಸಿದೆ ಹಿಂದೆ

ದೂರ್ವಾಸಶುಕ ವ್ಯಾಧ ಜೈಗೀಶ ರೂಪದಲಿ ||

ಈರ್ವರರಿಯ ಪರಿಲಿ ಹರಿಯ ಮೆಚ್ಚಿಸಿದೆ||೨||


ಸುರನದೀ ಧರ ನಿನ್ನ ಚರಿತೆಗಳ ವರ್ಣಿಸಲು |

ಸುರಪ್ರಮುಖ ಸುಮನ ಸಾಧ್ಯರಿಗಸದಳಾ||

ಸ್ಮರನ ಪಿತ ಶ್ರೀಜಗನ್ನಾಥವಿಟ್ಠಲನ ಸಂ |

ಸ್ಮರಣೆಯನೆ ಕೊಟ್ಟು ಉದ್ಧರಿಸೊ ದಯದಿಂದ||೩||

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು