||ಶಿವ ಸ್ತುತಿ ||
ರಾಗ : ಶಿವರಂಜಿನಿ
ತಾಳ : ಆದಿತಾಳ
ಲಿಂಗಾಯನ್ನಂತರಂಗ ಶಿವಶಿವ ||
ಮಂಗಳಾಂಗ ರಾಮ ಸರ್ವೋತ್ತಮ ಲಿಂಗಾ ||ಪ||
ಮಂದಾಕಿನಿ ಧರೆಗೆ ಗಂಗಾಂಬುಜ ಮಜ್ಜನೆಯ |
ಚಂದ್ರಮೌಳಿಗೆ ಗಂಧ ಸಮರ್ಪಣೆಯೆ ||
ಇಂದು ರವಿನೇತ್ರನಿಗೆ ಕರ್ಪೂರದಾರತಿಯೇ |
ಕಂದರ್ಪಜನಕಗೆ ಮಿಗಿಲಾಪೇಕ್ಷೆಯೆ ||೧||
ಘನ ವಿದ್ಯಾತುರನಿಗೆ ಮಂತ್ರ ಕಲಾಪವೆ |
ಧನಪತಿ ಸುಖಗೆ ಧನ ಕಾಣಿಕೆಯೆ
ಮನೆ ರಜತ ಪರ್ವತಗೆ ಮಣಿಮಾಯಾಭರಣವೆ
ಮನೋ ನಿಯಾಮಕಗೆ ಎನ್ನ ಈ ಭಿನ್ನಪವೇ||೨||
ವೈರಾಗ್ಯ ನಿಧಿಗೆ ವಿಷಯಪರಾರ್ಥವೆ ||
ವೀರವಡ ಪತಿಗೆ ಇದು ಸ್ತೋತ್ರವೆ |
ವೀರರಾಘವ ವಿಜಯ ವಿಠಲನ್ನ |
ವಾರಿಜದಿಂದ ನೆಲೆಸಿದ ಶಿವಮಹಾ||೩||
0 ಕಾಮೆಂಟ್‌ಗಳು