|| ಹರಿ ಸ್ತುತಿ ||
ರಚನೆಃ ಶ್ರೀಪಾದರಾಜರು
ರಂಗನಾಥನ ನೋಡುವ ಬನ್ನಿ
ಶ್ರೀರಂಗನ ದಿವ್ಯ ವಿಮಲದಲ್ಲಿಹನ ||ಪ||
ಕಮನೀಯ ಗಾತ್ರನ ಕರುಣಾಂತರಂಗನ
ಕಾಮಿತಾರ್ಥವನೀವ ಕಲ್ಪವೃಕ್ಷನ
ಕಮಲ ದಳ ನೇತ್ರನ ಕಸ್ತೂರಿ ರಂಗನ
ಕಾಮಧೇನು ಕಾವೇರಿ ರಂಗನ ||೧||
ವಾಸುಕಿ ಶಯನನ ವಾರಿಧಿ ನಿಲಯನ
ವಾಸುದೇವ ವಾರಿಜನಾಭನ
ವಾಸವಾದಿ ಭಕ್ತ ಹೃದಯಾಂಬುಧದಲ್ಲಿ
ವಾಸವಾಗಿರುತಿಹ ವಸುದೇವ ಸುತನ ||೨||
ಮಂಗಳ ಗಾತ್ರನ ಮಂಜುಳ ಭಾಸನ
ಗಂಗಾಧರ ಅಜ ಜನಕನ
ಸಂಗೀತಲೋಲನ ಸಾಧು ಸಮ್ಮತನ
ರಂಗವಿಠಲ ರಾಜೀವ ನೇತ್ರನ ||೩||
0 ಕಾಮೆಂಟ್‌ಗಳು