|| ಶ್ರೀರಾಮ ಸ್ತುತಿ ||
ಸೀತಾರಾಮ ಸೀತಾರಾಮ
ಸೀತಾರಾಮ ಶ್ರೀ ರಘುರಾಮ ||ಪ||
ಕೇಶವ ರೂಪನ ಕರುಣಾತ್ಮಕನೆ
ಕಾರುಣ್ಯಗೊಡೆಯನೆ ಕಮಲನಯನ ಹರಿ ||೧||
ಗೋವಿಂದಾತ್ಮನೆ ಗೋಪಾಲಕನೆ
ಗೋಕುಲದೊಡೆಯನೆ ಗೋಪಿಯ ಸುತ ಹರಿ ||೨||
ಮಾಧವ ಮಹಿಮನೆ ಮಣಿಗಣ ಭೂಷಣ
ಮಕರ ಕುಂಡಲಧರ ಮಾರ ಜನಕ ಹರಿ ||೩||
ಮಧುಸೂದನನೆ ಮಾಯಾ ರೂಪನೆ
ಮಾಯಾ ನಾಟಕ ಮಹಿಮಾಂಬುದೆ ಹರಿ ||೪||
ತ್ರಿವಿಕ್ರಮನೆ ತ್ರಿಗುಣ ವಂದಿತನೆ
ತ್ರಿಮೂರ್ತಿಗೊಡೆಯನ ತ್ರಿಜಗ ವಂದಿತ ಹರಿ ||೫||
ನಾರಾಯಣನೆ ನಾಮ ಸಹಸ್ರನೆ
ನಾರದ ವಂದಿತ ನರನ ಸಾರಥಿ ಹರಿ ||೬||
ವಿಪ್ರ ನೆನಿಪನೆ ವಿದುರ ವಂದಿತನೆ
ವಿಶ್ವ ವ್ಯಾಪಕ ವಿಶ್ವ ರೂಪ ಹರಿ ||೭||
ಹೃಷೀಕೇಶನೆ ಇಷ್ಟ ದಯಾನ್ವಿತ
ಹರಿಹರ ರೂಪನೆ ಹಯವದನನೆ ಹರಿ ||೮||
ಉಪೇಂದ್ರ ವರದನೆ ಉದರ ಪೋಷಕನೆ
ಉಚಿತಾನಂತನೆ ಉತ್ತಮೋತ್ತಮ ಹರಿ ||೯||
ಪುರುಷೋತ್ತಮನೇ ಪುಣ್ಯ ಚರಿತ್ರನೆ
ಪುರಾಣ ಪುರುಷನೆ ಪೂತನತನ ಹರಿ ||೧೦||
ಸಂಕರ್ಷಣನೆ ಶತ ಶಿರ ಹರಣನೆ
ಶ್ಯಾಮಲ ವರ್ಣನೆ ಶಂಖ ಚಕ್ರ ಹರಿ ||೧೧||
ಅಧೋಕ್ಷಜ ಹರಿ ಅಕ್ರೂರ ವರದನೆ
ಅಕಳಂಕ ರೂಪನೆ ಆತ್ಮರಕ್ಷಕ ಹರಿ ||೧೨||
ವಿಷ್ಣು ಎನಿಪನೆ ವಿದುರ ವಂದಿತನೆ
ವಿಶ್ವ ವ್ಯಾಪಕ ವಿಶ್ವರೂಪ ಹರಿ ||೧೩||
ವಾಮನ ನಾಮನೆ ವಾರಿಧಿ ಬಂದನ
ದಾಸನ ವಂದಿತ ವೈಭವ ಶೋಭಿತ ಪರಿ ||೧೪||
ಶ್ರೀಧರ ರೂಪನೆ ಶ್ರೀ ವತ್ಸಲಾಂಛನ
ಶ್ರೀ ರಮೆಯರಸನೆ ಶ್ರೀ ಕರ್ತಾ ಹರಿ ||೧೫||
ಪದ್ಮನಾಭನೆ ಪದ್ಮ ವದನನೆ
ಪದ್ಮ ಪದದ್ವಯ ಪದ್ಮ ನಯನ ಹರಿ ||೧೬||
ದಾಮೋದರನೆ ದಾನವಾಂತಕನೆ
ದಶಾವತಾರನೆ ಧರಾಧಿಪತಿ ಹರಿ ||೧೭||
ವಾಸುದೇವನೆ ಪಟಪತ್ರ ಶಯನನೆ
ವಸುದೇವ ಸುತನೆ ವನಜನಾಭ ಹರಿ ||೧೮||
ಪ್ರದ್ಯುಮ್ಮ ಹರಿ ಪಾವನ ರೂಪನೆ
ಪಂಡಿತ ರಕ್ಷಕ ಅಪಾರ ಮಹಿಮ ಹರಿ ||೧೯||
ಅನಿರುದ್ದಾ ಹರಿ ಅಪಾರ ಮಹಿಮನೆ
ಅಗಣಿತ ಗುಣಗಣ ಅತಿ ಸುಂದರ ಹರಿ ||೨೦||
ಅಚ್ಯುತಾನಂತನೆ ಅಖಂಡ ಮಹಿಮನೆ
ಆಶ್ರಿತ ರಕ್ಷಕ ಆತ್ಮರೂಪ ಹರಿ ||೨೧||
ಜನಾರ್ಧನಾ ಪರಿ ಜಾಂಬಾರಿ ವಂದಿತ
ಜಾನಕಿ ರಮಣನೆ ಜಯ ವಿಗ್ರಹ ಹರಿ ||೨೨||
ಹರಿ ಎನಿಪನೆ ಅರಿಯ ಮರ್ದಿಸಿದವನೆ
ಹರಿಹರ
ನಾರಸಿಂಹನೆ ನಗವದ ಶೀರ್ಷನೆ
ನಾಮ ಸಹಸ್ರನೆ ನರನ ಸಾರಥಿ ಹರಿ ||೨೪||
ಶ್ರೀ ಕೃಷ್ಣನೇ ಹರಿ ಕೃಷ್ಣ ಗೋವಿಂದನೇ
ಕಷ್ಟವ ನೀಗುವ ಶರಣ ರಕ್ಷಕ ಹರಿ ||೨೫||
ಮಂಗಳ ರೂಪನೆ ಮಂಗಳದಾಯಕ
ಮಂಗಳವನು ದಿನ ನೀಡುತ ಪೊರೆ ಹರಿ ||೨೬||
0 ಕಾಮೆಂಟ್‌ಗಳು