|| ಶಿವಸ್ತುತಿ ||
ರಚನೆ : ಜಗನ್ನಾಥ ದಾಸರು
ರಾಗ : ಕಲ್ಯಾಣಿ
ತಾಳ : ಖಂಡಛಾಪು
ಸೋಮ ಶಿವ ಶರ್ವ ಭವ ಶ್ರೀಕಂಠ ನಿನ್ನ ಪದ
ತಾಮರಸಯುಗಗಳಿಗಾನಮಿಸುವೆ || ಪ ||
ಮೃತ್ಯುಂಜಯ ಮೃಗಾಂಗ ಕೃತ್ತಿವಾಸ ಕೃಪಾಳು |
ವಿತ್ತಪತಿಸಖ ವಿನಾಯಕನ ಜನಕ ||
ನೃತ್ಯವರ್ಗಕೆ ಬಹ ಅಪಮೃತ್ಯು ಪರಿಹರಿಸಿ ಸಂ -|
ಪತ್ತು ಪಾಲಿಪುದು ನಿವೃತ್ತಿ ಸಂಗಮವಾಸ || 1 ||
ಗೋಪತಿ ಧ್ವಜ ಘೋರ ಪಾಪ ಸಂಹರಣ ಹರಿ - |
ತೋಪಲೋಪಮ ಕಂಠ ಚಾಪಪಾಣೆ ||
ಶ್ರೀಪತಿಯ ಶ್ರೀನಾಭಿ ಕೂಪಸಂಭವತನಯ |
ನೀ ಪಾಲಿಸೆಮ್ಮನು ವಿರೂಪಾಕ್ಷ ಗುರುವೇ || 2 ||
ಭಸಿತ ಭೂಷಿತ ಡಮರು ಸುಳಗೈಯನೆ ಶಂಭು |
ಕಿಸಲಯೋಪಮ ರವಿಶಶಿಭೂಷಣ ||
ಅಸುರರಿಪು ಸಿರಿ ಜಗನ್ನಾಥವಿಠಲನ ಪದ |
ಬಿಸಜ ಧ್ಯಾನವನೀಯೊ ಹಸನಾಗಿ ಕಾಯೋ ||3||
0 ಕಾಮೆಂಟ್‌ಗಳು