ದೇವಿ ಬಂದಳೆ ಸಿರಿದೇವಿ ಬಂದಳೆ - Devi Bandale Siridevi Bandale

|| ದೇವಿ ಸ್ತುತಿ ||

 ಜಾನಪದ ಶೈಲಿ 





ದೇವಿ ಬಂದಳೆ ಸಿರಿದೇವಿ ಬಂದಳೆ

ಚೌರಿ ರಾಗಟೆ ಹಾಕಿದ ಚೆಲುವೆ ಬಂದಳೆ ||ಪ||


ಬುಗುಡಿ ಮೂಗುತೀ ಇಟ್ಟ ಸುಗುಣೆ ಹರಿಸತೀ |

ವಾರಿಜಾ ಮುಖಿ ರಥವನೇರಿ ಬಂದಳೇ II೧II


ಸ್ನಾನ ಮಾಡಿರಿ ದೇವಿ ಪೂಜೆ ಮಾಡಿರಿ

ದೇವಿ ಮುಂದೆ ನಿಂತುಕೊಂಡು ವರವ ಬೇಡಿರಿוופון


ಸೀರೆ ಉಟ್ಟಳೆ ಒಳ್ಳೆ ಬಳೆಯ ತೊಟ್ಟಳೆ

ಮಗುವನೆತ್ತಿಕೊಂಡು ತಾ ನಗುತ ಬಂದಳೇ||೩||


ಕಡಗ ಕಂಕಣ ಋಳಿ ಗೆಜ್ಜೆ ಪೈಝಣ

ಲು ಘಲು ಎನುತ ತಾ ಕುಣಿದು ಬಂದಳೇII೪II


ರಂಗ ವಿಠಲನ ಅರಸಿ ಶೃಂಗಾರದಿಂದಲೀ

ಬಂದು ನೆಲೆಸಿಹ ಭಕ್ತರ ಹೃದಯ ಕಮಲದಲಿ||೫||








ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು