ಗೌರಿ ದೇವಿಗೆ ಸಖಿ ತಾರೇ ಆರುತಿ - Gowri Devoge Sakhi Tare Aruthi

|| ಗೌರಿಗೆ ಆರತಿ ಹಾಡು ||




ಗೌರಿ ದೇವಿಗೆ ಸಖಿ ತಾರೇ ಆರುತಿ

ಸಖಿ ತಾರೇ ಆರುತಿ ಸಖಿ ತಾರೇ ಆರುತಿ || ಪ ||


ಮುನಿಜನ ವಂದಿತೆ ಮನದಭಿಮಾನಿಯೇ

ಗಣಪತಿ ಷಣ್ಮುಖ ಜನನೀ ದೇವಿಗೆ || ೧ ||


ಶಂಕರಿ ಭಕ್ತ ಸುಶಂಕರಿ ದೈತ್ಯ

ಭಯಂಕಾರಿಯಾದ ಶಶಾಂಕ ಮುಖಿಗೆ || ೨ ||


ಶ್ಯಾಮಸುಂದರ ನಾಮ ಪತಿ ಸಹ ನೇಮದಿ

ನೇಮದಿ ಪಠಿಸುವ ಹೈಮಾವತಿಗೆ || ೩ ||

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು