|| ಪಾಂಡುರಂಗ ಸ್ತುತಿ ||
ಪಂಢರಾಪುರವೆಂಬ ದೊಡ್ಡ ನಗರ
ಅಲ್ಲಿ ವಿಠೋಬನೆಂಬ ಸಾಹುಕಾರ
ವಿಠೋಬನಿರುವದು ನದಿತೀರ
ಅಲ್ಲಿ ಪಂಢರಿಭಜನೆ ವ್ಯಾಪಾರ ||ಪ||
ತಂದೆ ನೀನೆ ತಾಯಿ ನೀನೆ ಪಾಂಡುರಂಗ
ನಮ್ಮ ಬಂಧು ನೀನೆ ಬಳಗ ನೀನೆ ಪಾಂಡುರಂಗ
ಭಕ್ತರ ಪೋಷಕ ಪಾಂಡುರಂಗ
ನಮ್ಮ ಮುಕ್ತಿದಾಯಕ ಪಾಂಡುರಂಗ ||೧||
ವಿಠೋಬನಿಗೆ ಪ್ರಿಯ ತುಳಸಿಹಾರ
ಅಲ್ಲಿ ಭಕ್ತ ಜನರ ವ್ಯಾಪಾರ
ವಿಠೋಬನಿಗೆ ಪ್ರಿಯ ಬುಕ್ಕಿಯ ಗಂಧ
ಅಲ್ಲಿ ಚಂದ್ರಭಾಗಾ ಸ್ನಾನ ಬಲು ಅಂದ ||೨||
ಶ್ರೀಹರಿ ವಿಠ್ಠಲ ಪಾಂಡುರಂಗ
ಜಯ ಹರಿ ವಿಠ್ಠಲ ಪಾಂಡುರಂಗ
ವಿಠ್ಠಲ ವಿಠ್ಠಲ ಪಾಂಡುರಂಗ ನಮ್ಮ
ಪುರಂದರ ವಿಠ್ಠಲ ಪಾಂಡುರಂಗ ||೩||
0 ಕಾಮೆಂಟ್‌ಗಳು