ಸಾರಿದೆನೋ ನಾ ನಿನ್ನ ವೆಂಕಟರಮಣ - Sarideno Naa Ninna Venkataramana

|| ವೆಂಕಟರಮಣ ಸ್ತುತಿ ||





ಸಾರಿದೆನೋ ನಾ ನಿನ್ನ ವೆಂಕಟರಮಣ

ನೀರಜನಯನನೆ ನಿರ್ಮಲ ಗುಣರನ್ನ || ಪ |


ಅನಾಥನು ನಾನು ಎನಗೆ ಬಂಧುವು ನೀನು

ನಿನ್ನವನೆಂದು ನೋಡೋ ನೀನಾಗಿ ದಯ ಮಾಡೋ||೧||


ಎನ್ನ ಕುಂದುಗಳನ್ನು ಎಣಿಸಲಾಗದೋ ದೇವಾ

ಪನ್ನಗಾಚಲ ವಾಸ ನೀ ಕಾಯೋ ನಿರ್ದೋಷಾ ||೨||


ದೇಶ ದೇಶದವರ ಪೊರೆದಂತೆ ಪೊರೆ ಎನ್ನ

ಶೇಷಾಚಲರನ್ನ ಶ್ರೀಶಾ ಸಿರಿ ಹಯವದನಾ || ೩ ||



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು