|| ಶಿವ ಸ್ತುತಿ ||
ರಜತಾದ್ರಿ ನಿಲಯನ ರಜನೀಶಧರನ
ತೋರೆ ಪಾರ್ವತಿಯೆ ||ಪ||
ಪಂಚಾನನ ಶಂಕರನ ಶ್ರೀಹರಿ
ಮಂಚಪದವಿ ಪಡೆದವನ
ಪಂಚಬಾಣ ಮದಹರನ ಗುರು ವಿರಿಂಚಿ
ದೂರ್ವಾಸ ಶುಕನ ||೧||
ನಂದಿ ಸುಶ್ಯಂದನ ಶಿವನ ಗರ
ಕಂದರ ತ್ರಿಪುರಾಂತಕನ
ಮಂದಾಕಿನಿ ಧರ ಭವನ ಸುರ ವೃಂದ
ವಿನುತ ನಗ ಚಾಪಧರನ ||೨||
ಸಾಮಜ ಚರ್ಮಾಂಬರನ
ಶುಭ ಕಾಮಿತ ಫಲದಾಯಕನ ||
ವಾಮದೇವ ಮುನಿಸುತನ
ಶ್ರೀವರ ಶ್ಯಾಮಸುಂದರ ಪ್ರೇಮದ ಸಖನ ||೩
0 ಕಾಮೆಂಟ್ಗಳು