||ಶ್ರೀ ವೆಂಕಟಾಚಲ ಅವಧೂತ ಸ್ತುತಿ||
ರಾಮ ಬಂದ ಶಾಮ ಬಂದ
ಶಿವನೇ ತಾ ಬಂದ ತಂಗಿ ಶಿವನೇ ತಾ ಬಂದ
ಸಖರಾಯ ಪುರವಾಸಿ ಗುರುನಾಥ ಬಂದ || ಪ ||
ಅಣುವು ಇವನೇ ಮಹಿಮ ಇವನೇ
ಎಲ್ಲೆಲ್ಲೂ ಇವನೆ ತಂಗಿ ಜಗವೆಲ್ಲಾ ಇವನೇ
ಮನಃ ಶುದ್ದಿ ಇದ್ದರಲ್ಲಿ ನಲಿದಾಡುತಾನೇ ||೧||
ನದಿಯು ಇವನೆ ಸಾಗರ ಇವನೆ
ಗಂಗೆಯು ಇವನೆ ತಂಗಿ ಗಂಗೆಯು ಇವನೆ
ಸೂರ್ಯ ಚಂದ್ರರ ಬೆಳಗುವಂತ ಚೈತನ್ಯ ಇವನೇ||೨||
ವೇದ ಇವನೆ ಶಾಸ್ತ್ರ ಇವನೆ ಗ್ರಹಬಲನು ಇವನೆ
ತಂಗಿ ಗ್ರಹಬಲನು ಇವನೇ,
ವೇದ ಪುರುಷ ಜಗವ ಬೆಳಗೊ ನರನಾಗಿದ್ದಾನೆ ||೩||
ಹರಿಯು ಇವನೆ ಹರನು ಇವನೆ ಬ್ರಹ್ಮಾನು ಇವನೆ
ತಂಗಿ ಬ್ರಹ್ಮಾನು ಇವನೆ
ಕರ್ಮ ಕಳೆದು ಭಕ್ತಿ ಇತ್ತು ಉದ್ದರಿಸೋನಿವನೆ ||೪||
ಹುಟ್ಟೋನಿವನೆ ಸಾಯೋನಿವನೆ
ಚಿರಂಜೀವಿ ಇವನೆ ತಂಗಿ ಚಿರಂಜೀವಿ ಇವನೆ
ವಿಶ್ವವನ್ನೇ ವ್ಯಾಪಿಸಿದಂಥ ಓಂಕಾರ ಇವನೆ ||೫||
ಸಗುಣನು ಇವನೆ ನಿರ್ಗುಣ ಇವನೆ
ನಿರಾಕಾರ ಇವನೆ ತಂಗಿ ನಿರಾಕಾರ ಇವನೆ
ಅಘಟಿತ ಘಟನ ತೋರುವಂಥ ಗುರನಾಥ ಇವನೆ||೬||
0 ಕಾಮೆಂಟ್‌ಗಳು