||ಶ್ರೀ ವೆಂಕಟಾಚಲ ಅವಧೂತ ಸ್ತುತಿ||
ಸುಮ್ನೆ ಕಾಲ ಕಳೆದು ಬಿಟ್ಯಲ್ಲೋ
ಗುರುನಾಥನ ಮರೆತು,
ಬಂದು ಹಂಗೆ ಹೋಗಿಬಿಟ್ಯಲ್ಲೋ
ಅವಧೂತನ ಬಂದು ಹಂಗೆ ಹೋಗಿಬಿಟ್ಯಲ್ಲೋ||ಪ||
ಹಿಂದೆ ಉಳಿದ ವಾಸನಾದಿ, ಕರ್ಮವನ್ನು ಕಳೆಯೆ
ನೀನು ಸತ್ತು ಹುಟ್ಟಿ ಭವಕೆ ಬಂದೆ...
ಗುರುವ ಮರೆತು ಭವದಿ ನೊಂದೆ || 1 ||
ಗುರುವ ನೀನು ನಂಬಲಿಲ್ಲ ಅವನ ವಾಕ್ಯ ನಡೆಸಲಿಲ್ಲ
ನಾನು ಎಂಬ ಹಮ್ಮು ಬಿಡದೇ...
ಭ್ರಾಂತಿ ಹೊಂದಿ ಅಳಿದೆಯಲ್ಲೋ || 2 ||
ಬರಿಯ ಮೈಯ ತೊಳೆದರೇನೊ,
ತನುವ ತೊಳೆದೆಯೇನೋ
ಸೂಕ್ಷ್ಮ ಶಂಕೆಯನ್ನು ಮನದಿ ಹೊಂದಿ...
ಕೊಚ್ಚೆಯಲ್ಲಿ ಬಿದ್ದೆಯಲ್ಲೋ || 3 ||
ತತ್ವವನ್ನು ತಿಳಿಯಲಿಲ್ಲ, ಭಕ್ತಿಯಿಂದ ಭಜಿಸಲಿಲ್ಲ
ಸ್ವಾರ್ಥಕಾಗಿ ದುಡಿದು ದುಡಿದೂ...
ದೇಹ ಕುಗ್ಗಿ ಹೋಯಿತಲ್ಲೋ ||4||
ಆತ್ಮನೆಂದು ಅಳಿವುದಿಲ್ಲ ದೇಹವೆಂದು ಉಳಿವುದಿಲ್ಲ
ದೇಹ ಮಣ್ಣು ಸೇರೋ ಒಳಗೆ...
ಗುರುವ ಸೇರಿ ಮುಕ್ತಿ ಪಡೆಯೋ | 5 ||
ದೇವ ತಾನೆ ಧರೆಗೆ ಬಂದು
ಗುರುವಿನಿಂದ ಜ್ಞಾನ ಪಡೆದು
ಗುರುವಿನಣತಿಯಂತೇ ನಡೆದು...
ಧರ್ಮವನ್ನು ರಕ್ಷಿಸುವನೋ || 6 ||
0 ಕಾಮೆಂಟ್‌ಗಳು