ಶ್ರೀ ಬ್ರಹ್ಮಚೈತನ್ಯ ಜೋಗುಳ Shri Brahmachaitanya Jogula

 || ಶ್ರೀ ಬ್ರಹ್ಮಚೈತನ್ಯ ಜೋಗುಳ ||




ಜೋ ಜೋ ಜೋ ಜೋ ತಾಯಿ ಕಂದಾ

(ಜೋ) ಸಚ್ಚಿದಾನಂದ ಸ್ವರೂಪಾನಂದ ಜೋ ಜೋ ||



ಶ್ರೀರಾಮನಪ್ಪಣೆ ಪಡೆದುಬಂದಿರುವ

ಮಾರುತಿಯ ಅವತಾರ ನಿನಾಗಿರುವ

ಗೀತಾಬಾಯಿ ಉದರದಿ ಜನ್ಮ ತಾಳಿರುವ

ರಾವಜಿ ಪುತ್ರನು ನೀನಾಗಿರುವೆ ಜೋ ಜೋ | ೧||



ಲಿಂಗೂಪಕರ ಮೊಮ್ಮಗನಾಗಿ ಬೆಳೆದರುವೆ 

ಊರ ಜನರಿಗೆ ಮುದ್ದು ಮಗುವಾಗಿರುವೆ 

ಚಿಕ್ಕವಯಸ್ಸಿನೀ ಮನೆಯ ಬಿಟ್ಟಿರುವೆ 

ಸದ್ಗುರು ಶೋಧಕ್ಕೆ ತಿರುಗುತ್ತಲಿರುವೆ ಜೋ ಜೋ ||೨||



ತುಕಮಾಯಿ  ಪಾದಕೆ ಶರಣು ಹೋಗಿರುವೆ 

ನಿತ್ಯವು ಆಜ್ಞೆ ನೀ ಪಾಲಿಸುತ್ತಿರುವೆ

ಹಗಲು ರಾತ್ರಿ ಅವರ ನೆರಳಿನಂತಿರುವೆ 

ಸದ್ಗುರು ಕೃಪೆಗೆ ಪಾತ್ರನಾಗಿರುವ ಜೋ ಜೋ ||೩||



ಬ್ರಹ್ಮಜ್ಞಾನವನ್ನು ಗಳಿಸಿಕೊಂಡಿರುವೆ 

ಬ್ರಹ್ಮಚೈತನ್ಯ ಹೆಸರು ಪಡೆದಿರುವೆ 

ಸದ್ಗುರು ಆದ್ಧಪಡೆದು ಯಾತ್ರೆ ಹೊರಟಿರುವೆ 

ನಿಮಿಷಾರಣ್ಯಕೆಹೂರಾಶಿಗೆ ಬಂದಿರುವ ಜೊ ಜೋ || ೪ ||



ಕಾಶಿಯಲ್ಲಿ ಪ್ರತ ನೀ ಎಬ್ಬಿಸಿರುವೆ 

ಇಂದೂರಿನಲ್ಲಿ ನೀ ಕಂಡ ಹಿಂದಿರುವೆ 

ಜೀಜಿಬಾಯಿಯ ಮೇಲೆ ಕೃಪೆಯಮಾಡಿರುವೆ 

ಭಯಾಸಾಹೇಬರಿಗೆ ನಾಮ ಕೊಟ್ಟಿರುವ ಜೋ ಜೋ ||೫



ಗೋಂದಾವಲೆಗೆ ಬಂದು ಪ್ರಕಟನಾಗಿರುವೆ

ತಂದೆ ತಾಯಿಯ ಹತ್ತಿರ ವಾಸಮಾಡಿರುವೆ 

ಜನರ ಇಚ್ಚಿಯಂತಜಟೆಯ ತೆಗೆಸಿರುವೆ 

ಹೆಂಡತಿಯನ್ನು ಮನೆಗೆ ಕರೆದು ತಂದಿರುವೆ ಜೋ ಜೋ ||೬||



ಮರಣಹೊಂದಲು ಪತ್ನಿ ಮನೆಯ ಬಿಟ್ಟಿರುವೆ 

ಕುರುಡಿಯನ್ನು ನೀನು ಮದುವೆಯಾಗಿರುವೆ 

ತೀರ್ಥಾಟನ ಮಾಡಿ ತಿರುಗಿಬಂದಿರುವೆ 

ತಾಯಿಯ ಇಚ್ಛೆಯನ್ನು ಪೂರ್ಣ ಮಾಡಿರುವೆ ಜೋ ಜೋ ||೭||



ಗೋಂದಾವಲೆಯಲಿ ರಾಮನ ಸ್ಥಾಪನೆ ಮಾಡಿರುವೆ 

ಸಗುಣೋಪಾಸನ ಹಾಕಿಕೊಟ್ಟಿರುವೆ 

ರಾಮನಾಮಸ್ಮರಣೆ ಮಾಡಲು ಹಚ್ಚಿರುವೆ 

ಶ್ರೀರಾಮಭಕ್ತಿ ಮಾಡಲು ಕಲಿಸಿಕೊಟ್ಟಿರುವೆ ಜೋ ಜೋ ||೮||



ಬ್ರಹ್ಮಾನಂದರಂಥ ಶಿಷ್ಯನ ಪಡೆದಿರುವೆ 

ಲಕ್ಷಗಟ್ಟಲೆ ಜನರಿಗೆ ನಾಮಕೊಟ್ಟಿರುವೆ 

ಊರೂರಲ್ಲಿ ರಾಮಸ್ಥಾಪನೆ ಮಾಡಿರುವೆ

ಸಗುಣೋಪಾಸನೆಯಲ್ಲಿ ಪ್ರೀತಿ ಬೆಳೆಸಿರುವೆ ಜೋ ಜೋ ||೯||



ಅನ್ನದಾನ ಮಾಡಲು ಜನರಿಗೆ ಹಚ್ಚಿರುವೆ

ಗೋಗಳ ರಕ್ಷಣೆ ಮಾಡಲು ನೀನು ಕಲಿಸಿರುವೆ

ದೀನಜನರ ಮೇಲೆ ದಯೆ ತೋರಿಸಿರುವೆ

ಪ್ರಾಣಿಮಾತ್ರರನ್ನು ಪ್ರೇಮ ಮಾಡಿರುವ ಜೋ ಜೋ ||೧0||



ತಾಯಿಯೊಡನೆ ಕಾಶಿಯಾತ್ರೆ ಮಾಡಿರುವ

ಹೊರಡುವಾಗ ಎಲ್ಲ ದಾನ ಮಾಡಿರುವೆ 

ಮನಸು ನೋಯಿಸಲಾರದೆ ವಿಷವ ಕುಡಿದಿರುವೆ

ಜನರು ಮಾಡಿದ ನಿಂದ ಸಹಿಸಿಕೊಂಡಿರುವ ಜೋ ಜೋ||೧೧ ||


ಕರ್ನಾಟಕದಲ್ಲಿ ನೀ ಭಕ್ತಿ ಬೆಳೆಸಿರುವೆ 

ಬೆಳಧಡಿಯಲ್ಲಿ ರಾಮಸ್ಥಾಪನೆ ಮಾಡಿರುವೆ 

ತೇರಾಕೋಟಿ ಜಪದ ಯಜ್ಞ ಮಾಡಿರುವೆ 

ಹೆಬ್ಬಳ್ಳಿಯಲ್ಲಿ ನೀ ಪಾದುಕೆ ಇಟ್ಟಿರುವೆ ಜೋ ಜೋ || ೧೨ ||


ಮಾಘ ಶುಕ್ಲ ದ್ವಾದಶಿಯ ಶುಭದಿನವೆ

ತೊಟ್ಟಿಲದಲ್ಲಿ ಹಾಕಿ ನಿನ್ನ ತೂಗುವೆ

ಸದ್ಗುರು ಕೃಪೆಯ ಯಾಚಿಸಿ ಜೋಗುಳ ಹಾಡುವೆ 

ಮಗು ಅವಧೂತನ ಹರಸು ಸದ್ಗುರುವೆ ಜೋ ಜೋ ||೧೩ ||


|| ಜಾನಕೀಜೀವನ ಸ್ಮರಣ ಜಯಜಯರಾಮ ||

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು