ಸದ್ಗುಣಗಳ ಸಂಪತ್ತೇ ಅಮ್ಮ ನಮ್ಮಮ್ಮ - Sadgunagala Sampatte Amma Nammamma

|| ಅಂಬಾ ಸ್ತುತಿ ||

ರಾಗ : ಪೀಲು



ಸದ್ಗುಣಗಳ ಸಂಪತ್ತೇ ಅಮ್ಮ ನಮ್ಮಮ್ಮ

ಸಂಪಿಗೆ ಹೂವಿನ ಮಾಲೇ ಅಮ್ಮ ನಮ್ಮಮ್ಮ  ||ಪ||


ಅಪರೂಪ ರೂಪಸಿ ಅಮ್ಮ ನಮ್ಮಮ್ಮ

ಅಂದಾದ ಅರಗಿಣಿ ಅಮ್ಮ ನಮ್ಮಮ್ಮ

ರಂಗು ರಂಗಿನ ಸೀರೆಯಲ್ಲಿ ಅಮ್ಮ ನಮ್ಮಮ್ಮ

ಅಚ್ಚ ಹಸಿರು ರವಿಕೆಯಲ್ಲಿ ಅಮ್ಮ ನಮ್ಮಮ್ಮ||೧||



ಕೈತುಂಬ ಬಳೆಗಳು ಅಮ್ಮ ನಮ್ಮಮ್ಮ

ಕಣ್ಣ ತುಂಬ ಕರುಣೆಯೆ ಅಮ್ಮ ನಮ್ಮಮ್ಮ

ಹಣೆಯಲ್ಲಿ ಕುಂಕುಮ ಅಮ್ಮ ನಮ್ಮಮ್ಮ

ಕೆನ್ನೆ ತುಂಬ ಅರಿಸಿನ ಅಮ್ಮ ನಮ್ಮಮ್ಮ ||೨||


ತುಟಿಯಲ್ಲಿ ಕಿರುನಗೆ ಅಮ್ಮ ನಮ್ಮಮ್ಮ

ಮುದ್ದಾದ ಮುಖದವಳು ಅಮ್ಮ ನಮ್ಮಮ್ಮ

ಕಾಲ್ತುಂಬ ಗೆಜ್ಜೆಯು ಅಮ್ಮ ನಮ್ಮಮ್ಮ

ಕೈಹಿಡಿದು ನಡೆಸುವಳು ಅಮ್ಮ ನಮ್ಮಮ್ಮ||೩||


ಸತ್ಯಲೋಕವಾಸಿಯೇ ಅಮ್ಮ ನಮ್ಮಮ್ಮ

ಶಂಕರನ ಅರ್ಧಾಂಗಿಯೇ ಅಮ್ಮ ನಮ್ಮಮ್ಮ

ಅನ್ನಪೂರ್ಣೆ ಮಾತೆಯೇ ಅಮ್ಮ ನಮ್ಮಮ್ಮ

ಜ್ಞಾನವಿಟ್ಟು ಸಲಹುವಳು ಅಮ್ಮ ನಮ್ಮಮ್ಮ||೪||


ಅರಿವಿನಿಂದ ನಡೆದರೆ ಅಮ್ಮ ನಮ್ಮಮ್ಮ

ಜೀವನ್ಮುಕ್ತಿ ಕೊಡುವವಳು ಅಮ್ಮ ನಮ್ಮಮ್ಮ

ಪೆನುಗೊಂಡ ವಾಸಿಯೆ ಅಮ್ಮ ನಮ್ಮಮ್ಮ

ವಾಸವಿ ದೇವಿಯೆ ಅಮ್ಮ ನಮ್ಮಮ್ಮ ||೫||


ಕುಂಡಲಿನಿ ಶಕ್ತಿಯೆ ಅಮ್ಮ ನಮ್ಮಮ್ಮ

ಸಾಧನೆಗೆ ಒಲಿವಳು ಅಮ್ಮ ನಮ್ಮಮ್ಮ

ಮಹಿಷಾಸುರ ಮರ್ದಿನಿ ಅಮ್ಮ ನಮ್ಮಮ್ಮ

ಚಾಮುಂಡಿ ಮಾತೆಯೆ ಅಮ್ಮ ನಮ್ಮಮ್ಮ

ಭಕ್ತಿಯಿಂದ ಕರೆದರೆ ಅಮ್ಮ ನಮ್ಮಮ್ಮ

ಭಕ್ತರ ಸಲಹುವಳು ಅಮ್ಮ ನಮ್ಮಮ್ಮ ||೬||



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು