|| ತತ್ವ ಪದ ||
ಅಂತರಂಗದ ಕದವ ತೆರೆದು ನೋಡಯ್ಯ
ಅಂತರಾತ್ಮನ ಇರವ ಅರಿವ ಮನ ಮಾಡಯ್ಯ||ಪ||
ಈ ಕಣ್ಣು ಕಾಣದೆ ಆ ಜ್ಯೋತಿ ಬೆಳಕನ್ನು
ಈ ಕಿವಿಯು ಕೇಳದೆ ಓಂಕಾರ ಧ್ವನಿಯನ್ನು
ಈ ಮೂಗು ಅರಿಯದೆ ಜ್ಞಾನ ವಾಸನೆಯನ್ನು
ಈ ರಸನ ಅರಿಯದೆ ಆ ಹಣ್ಣ ಸವಿಯನ್ನು||೧||
ಸೊಗವಾಗೆ ನಗೆಯೇಕೆ ದುಗುಡದಲಿ ಖತಿಯೇಕೆ
ಸೊಗವಾಗುವುದೆಂಬುದನು ಅರಿತೆಯಾ ಮನವೇ
ನಿನಗಾಗಿ ಜಗವಿಹುದೋ ಜಗಕಾಗಿ ನೀನಿಹೆಯೋ
ಒಗಟಿನಾ ಬಲೆಯನ್ನು ಅರಿವಂಥ ನರನಾಗು||೨||
ದೇಹವೇ ದಿವ್ಯರಥ ಇಂದ್ರಿಯಗಳೇ ಕುದುರೆ
ಜೀವಾತ್ಮ ಸಾರಥಿಯು ಬಾಳು ಸಾಗುತಲಿರೆ
ಕಡಿವಾಣ ಬಿಗಿ ಹಿಡಿದು ಮೋಹವನು ಸದೆಬಡೆದು
ಸತ್ಯಮಾರ್ಗದಿ ನಡೆದು ಮನವ ಒಂದೆಡೆ ನಿಲ್ಲಿಸೊ||೩||
0 ಕಾಮೆಂಟ್‌ಗಳು