|| ಶ್ರೀ ಬ್ರಹ್ಮಚೈತನ್ಯ ಸ್ತುತಿ ||
ಗುರುವರ ಬ್ರಹ್ಮ ಚೈತನ್ಯನಾಥಾ
ಚೈತನ್ಯನಾಥ ಸ್ವಾಮಿ ಸಮರ್ಥ || ಪ ||
ಅಂಜನದೇವಿಯ ಪ್ರೇಮದ ಕಂದ
ಭಕ್ತರುದ್ಧಾರಕ ಜನಿಸಿ ತಾ ಬಂದ
ಗೋಂದಾವಲಿ ಪುರದಲ್ಲಿ ನೆಲೆಸಿರುವ
ಸ್ವಾಮಿ ಸಮರ್ಥ || ೧ ||
ಶ್ರೀ ರಘುರಾಮರ ಮೂರ್ತಿ ಸ್ಥಾಪಿಸಿದೆ
ತಾರಕನಾಮದ ಮಂತ್ರ ಜಪಿಸಿದೆ
ಶ್ರೀರಾಮದಾಸರ ಪುನರವತಾರ ಪುನರವತಾರ||೨||
ಅದ್ಭುತ ಲೀಲೆಯ ತೋರುತಲಿ
ಭಕ್ತರ ಅಜ್ಞಾನ ಕಳೆಯುತಲಿ
ಮುಕ್ತಿಯ ಮಾರ್ಗವ ತೋರುವನೀತ ತೋರುವನೀತ||೩||
ತನುಮನ ಧನವೆಲ್ಲ ನಿನಗೆ ಅರ್ಪಿಸಿದೆ
ನಿನ್ನಯ ದಾಸರ ಸೇವಕನಾದ
ಎನ್ನನು ಸಲಹುವ ಭಾರವು ನಿನದೆ ಭಾರವು ನಿನದೆ||೪||
0 ಕಾಮೆಂಟ್‌ಗಳು