|| ಗುರು ಸ್ತುತಿ ||
ಶ್ರೀ ಗುರುಮಹಾರಾಜ ಜಗವನುದ್ಧರಿಸಲು
ಯೋಗ ನಿದ್ರೆಯಿಂದ ಬೇಗ ನೀನೇಳಯ್ಯ||ಪ||
ಸಗುಣ ಭೂಷಣ ನಿನ್ನ ಪೊಗಳಿ ಪಾಡುವರಿಂದ
ಬಗೆ ಬಗೆ ಸೇವೆಯ ಕೈಕೊಂಡು ಪೊರೆಯಲು||ಅ.ಪ||
ಮಾಣಗಂಗಾ ನದಿಯಲಿ ಸ್ನಾನ ಸಂಧ್ಯವಗೈದು
ಜಾನಕೀರಮಣನ ಮಾನಸ ಪೂಜೆಯ ಮಾಡಿ |
ನಿನ್ನ ಯಾಚಿಸೆ ಬಂದ ದೀನ ಅತಿಥಿಗಳಿಗೆ
ಘನರಾಮ ತಾರಕ ಮಂತ್ರ ದೀಕ್ಷವ ನೀಡೆ ||೧||
ಮಾರುತಿ ರೂಪವೆ ನರರು ನಿದ್ರಿಸುವಂತೆ
ಶ್ರೀರಘುವರನೊಳು ಬೆರೆತು ಸುಖಿಸುತಿರೆ |
ಅರಿಯದ ನರರಿಗೆ ಪರತತ್ವ ಬೋಧಿಸೆ
ಯಾರಿಪ್ಪರೆಂಬುದ ಅರಿತು ನೀನೇಳಯ್ಯಾ ||೨||
ಲೋಕಪಾಲನೆ ನೀನೆನಗೆ ಯಾಕಿಷ್ಟು ನಿರ್ದಯ
ವೆಂಕಟರಮಣ ಸಂಸೇವಿತ ನುತ ಪಾದ |
ಕಾಕಡಾರತೀ ತಂದು ಏಕಮನಸಿನಿಂದ
ಈಗ ನಾ ಬೆಳಗುವೆ ರಾಜೀವಲೋಚನ||೩||
0 ಕಾಮೆಂಟ್‌ಗಳು