|| ಲಕ್ಷ್ಮಿಗೆ ಆರತಿ ಹಾಡು ||
ಬೆಳಗುವೆನಾರತಿಯ ಲಕುಮಿಗೆ |
ಕೊಲ್ಲಾಪುರದಲ್ಲಿ ವಾಸಿಪ ದೇವಿಗೆ || ಪ ||
ಸೇವೆಯನರಿಯದ ಭಾವಿಕ ಜನರಿಗೆ (೨) |
ಭಾವನೆಯಿಂದಲಿ ಫಲವೀವಳಿಗೆ (೨) || ೧ ||
ಬಿಂಕದಿ ಮೆರೆವರ | ಬಿಂಕವ ಮುರಿಯುವ (೨) |
ವೆಂಕಟರಮಣನ ರಾಣಿಗೆ ನಿತ್ಯವು (೨) || ೨ ||
ಭಕ್ತರ ಪೂಜೆಗೆ ಮುಕ್ತಿಯ ನೀಡುವ (೨) |
ಸಕಲಾಭರಣೆಗೆ ಪಾವನ ಚರಿತೆಗೆ (೨) || ೩ ||
0 ಕಾಮೆಂಟ್‌ಗಳು