|| ಗೋವಿಂದ ಸ್ತುತಿ ||
ಓಕುಳಿಯಾಡೋಣ ಬಾರೊ ಗೋವಿಂದಾ |
ಗೋಕುಲದ ಗೋಪಿಯರೊಡಗೂಡಿ ಮುಕುಂದಾ ||
ಹಸಿರಿನ ಚಿಗುರಿನ ತೋರಣ ಕಟ್ಟಿದೆ
ಹೂ ಬಳ್ಳಿಗಳು ತೂಗಾಡುತ ತೊನೆದಿವೆ
ಬೆಳದಿಂಗಳು ತಂಪಾಗಿ ತೇಲಿದೆ
ಸುಳಿ ಗಾಳಿಯಲ್ಲಿ ಸುಗಂಧ ಸೂಸಿದೆ ||1||
ನಯನವು ನಿನ್ನನ್ನೇ ಹುಡುಕುತ ಅರಸಿದೆ
ಮನವೂ ನಿನ್ನಲಿ ಲೀನವಾಗಿದೆ
ಕರವೂ ಹೂಗಳ ಮಾಲೆ ಕಟ್ಟಿದೆ
ಚರಣ ಕರ್ಪಿಸಲು ಕಾತರದಿ ಕಾದಿದೆ ||2||
ಹಳದಿ ಹಸಿರು ಕೆಂಪು ನೇರಳೆ ಬಣ್ಣ
ಮುಖವು ಕಾಮನ ಬಿಲ್ಲಿನ ಬಣ್ಣ
ಸಖನೆ ನಿನ್ನಾಗಮನಕೆ, ಎನ್ನs ಮನ
ಕುಣಿದಿದೇ ಸ್ವಾಗತಿಸಲು ನಿನ್ನ || 3 ||
ಬಂಧು ಬಳಗದ ನಿಂದನೆ ಕೇಳದೆ
ಇಂದಿರೇಶಾ ನಾ ನಿನ್ನೊಡನಾಡುವೆ
ಬಂಧನವ ಕಳೆಸುತೊಮ್ಮೆ ನೀ ಬಂದು
ನಿನ್ನಯ ಚರಣವ ತೋರೋ ಜಯರಾಮನ || 4 ||
0 ಕಾಮೆಂಟ್‌ಗಳು