|| ಗುರು ಸ್ತುತಿ |
ಗುರುದೇವ! ನೀ ಮಾಡಿದುಪಕೃತಿಯನು ನಾನು
ಮರೆಯೆನೆಂದಿಗೂ ಇಹದೊಳು
ಪೊಡವಿಯೊಳಖಿಲ ವೇದಾಗಮಶಾಸ್ತ್ರಗಳ |
ಬಿಡದೆ ಸಾಧಿಸಿದ ವಾದಿಗಳೆಲ್ಲ ||
ಹೊಡೆದಾಡಿ ಕಾಣದ ಪರತತ್ತ್ವವನು ನೀನು |
ತಂದೆನ್ನ ಕರಕ್ಕೆ ಕೊಟ್ಟಿದ್ದರಿಂದ ||೧||
ಕಂದಮೂಲಗಳ ಸೇವಿಸಿ ವಾಯುಗಳನೊತ್ತಿ |
ಬಂಧಿಸಿ ಪಂಚಾಗ್ನಿ-ಮಧ್ಯದಲಿ ||
ನಿಂದು ಯೋಗಿಗಳು ನೋಡದಾ ಪರಬ್ರಹ್ಮ |
ತಂದೆನ್ನ ಕಣ್ಣಿಗೆ ತೋರಿದ್ದರಿಂದ ||೨||
ತರುಳ ಎನ್ನಯ ಮೇಲೆ ದಯಹುಟ್ಟಿ ಶಿವನೆ |
ಶ್ರೀ ಗುರುಸಿದ್ದನೆಂಬ ನಾಮವನಾಂತು ||
ಗುರುರೂಪದಿಂದೆನ್ನ ಬೋಧಿಸಿ ತನ್ನೊಳು |
ಬೆರೆಸುತ್ತ ಮೋಕ್ಷವನಿತ್ತುದ್ದರಿಂದ ||೨||
0 ಕಾಮೆಂಟ್‌ಗಳು