||ಶ್ರೀ ಶ್ರೀ ಶ್ರೀ ರಾಘವೇಶ್ವರ ಭಾರತೀ ಸ್ವಾಮಿಗಳ ಸ್ತುತಿ||
kannadabhajanlyrics.blogspot.com, Sri Sri raghaveshwara Bharathi Swamiji images |
ಮಧುರ S ಮಧುರ S
ಸತ್ಸಂಗದ ಸವಿಯದು ಮಧುರಾ S ||ಪ||
ಸತ್ಸಂಗ ವ ಸನ್ಮಾರ್ಗದಿ ನಡೆಸುವ
ಸದ್ಗುರು ಸಂಗವೆ ಅತಿ ಮಧುರಾ SSS ||ಅ.ಪ.||
ರಾಮಾ ಎನುವಕ್ಕರ ಮಧುರಾ
ರಾಮನಾಮವ ನೆನೆವುದು ಮಧುರ
ರಾಮನ ಧ್ಯಾನಿಪ ರಾಘವೇಶ್ವರರ
ರಾಮನೊಲವು ಅತಿಶಯ ಮಧುರ SS
ಕೋಮಲ ಕುಸುಮವೆ ಮಧುರ
ಕುಸುಮದ ಗಂಧವದೇ ಮಧುರ
ಕೋಮಲ ಕುಸುಮವ ನಾಚಿಪ ಶ್ರೀ-
ರಾಘವೇಶ್ವರರಾ ಮನವತಿಶಯ ಮಧುರಾ
ಮಾತೆಯ ಮಮತೆಯ ಮಧುರ
ಆ ಮಮತೆಯ ನೆರೆಯುವ ಹೃದಯವೆ ಮಧುರ
ಮಾತೆಯ ಮಮತೆಯ ಮೀರುವ ಒಲವನು
ಸುರಿಸುವ ರಾಘವ ಹೃದಯವತಿ ಮಧುರ
ನದಿಯಾ ಓಟವು ಮಧುರಾ
ಆ ನದಿಗಳ ಸಂಗಮ ನೋಟವು ಮಧುರಾ
ಹಲವು ನದಿಗಳ ಸಂಗಮ ಸಾಗರದೊಲು
ರಾಘವನಾ ನೋಟವತಿ ಮಧುರ
ಶುಕಪಿಕಗಳ ಸರವೇ ಮಧುರಾ ಆ
ಸ್ವರ ಮಾಧುರ್ಯವ ಸವಿದವ ನುಡಿಸುವ
ಸಕಲ ಜೀವಿಗಳ ಸರಸದಿ ನುಡಿಸುವ
ಸರಸಿ ಜಾನನನ ಸ್ವರವತಿ ಮಧುರಾ
ನವಿಲಿನ ನರ್ತನವೇ ಮಧುರ
ಆ ನಾಟ್ಯದ ನಡಿಗೆಯ ಲಾಸ್ಯವೇ ಮಧುರಾ
ಮೃದು ಹಾಸ್ಯದಿ ಮೆಲ್ನುಡಿಯುತ ನಡೆಯುವ
ರಾಘವನಡಿಗಳ ನಡಿಗೆಯತಿ ಮಧುರಾ
ಗುರುವಿನ ಮಹಿಮೆಯೇ ಮಧುರಾ
ಆ ಮಹಿಮಾತೀತನೆ ಅಗಣಿತ ಮಧುರಾ
ಶ್ರೀ ಮಜ್ಜಗದ್ಗುರು ಶಂಕರಾಚಾರ್ಯ ಪೀಠದಿ
ಮೆರೆವ ದೊರೆ ss ಅನಂತ ಮಧುರಾ
0 ಕಾಮೆಂಟ್‌ಗಳು