|| ಗೋವಿಂದ ಸ್ತುತಿ ||
ರಂಗ ಕುಣಿದ ಮುದ್ದು ರಂಗ ಕುಣಿದ. ||ಪ||
ಪೊಂಗೆಜ್ಜೆ ರವದೊಳು ರಂಗ ಕುಣಿದ
ಗೋಪಿ ಕಂಗಳ ಮುಂದೆ ಅಂಗಳದೊಳು ||ಅ.ಪ||
ಗೆಳೆಯರೆಂದೆನಿಸುವ ಎಳೆಮಕ್ಕಳೊಡಗೂಡಿ
ಬಳುಕುತ ಬಾಗುತ ನಲಿನಲಿದಾಡಿ
ಮೊಳೆವಲ್ಲು ಬಾಯಿಜೊಲ್ಲು ಗಿಳಿಸೊಲ್ಲಿನಿಂದಲಿ
ಕಳಕಳಿಸಿ ನಕ್ಕು ನಗುತ ಬಿದ್ದದ್ದು. ||೧||
ಸುಳಿಗುರುಳು ಪಣೆಯಲಿ ಒಲಿದಾಡಲು
ಬಲರಾಮ ತಿದ್ದಿದರಳುತ ಅಳುಕುತ
ಮಕ್ಕಳ ರತುನ ಚಿಕ್ಕ ಕೃಷ್ಣಯ್ಯನು
ಬೆಕ್ಕಿಗೆ ಬೆದರೈವೆ ಇಕ್ಕದೆ ನೋಡಿ ||೨||
ಅರಳೆಲೆ ಮಾಗಾಯಿ ಬೆರಳ ರನ್ನುಂಗುರ
ಕಿರುಗೆಜ್ಜೆ ಭಾರೆಂದು ತರಳರಿಗಿತ್ತು
ನಗುತತಿ ಮುದ್ದಿಸಿ ಬಿಗಿದಪ್ಪಲೆಶೋದೆಯ
ಮಗ ಪ್ರಸಂಕಟ ಚಿಗಿದುಡಿಯಲ್ಲಿ ||೩||
0 ಕಾಮೆಂಟ್‌ಗಳು