|| ಹರಿ ಭಜನೆ ||
ಮುದದಿ ಭಜಿಸುವೆವು ದೇವ ದೇವನೆ
ಹೃದಯ ಕಮಲದಲಿ ಒದಗು ಪಾವನನೆ ||ಪ||
ಕಂಗಳು ನಿನ್ನಯ ಮೂರ್ತಿಯ ಕಾಣಲಿ
ಕಿವಿಗಳು ನಿನ್ನಯ ಕೀರ್ತಿಯ ಕೇಳಲಿ
ಜಿಹ್ವೆಯು ನಿನ್ನಯ ನಾಮವ ಹೇಳಲಿ
ಕರಗಳೆರಡು ನಿನ್ನ ಪೂಜಿಸಲಿ ಹರಿ ||೧||
ಪಾದ ದ್ವಯವು ತೀರ್ಥಯಾತ್ರೆಯ ಮಾಡಲಿ
ಸಾಧು ಸಜ್ಜನರಿಗೆ ಶಿರವು ಮಣಿಯಲಿ
ಮೋದದಿ ಕರತಾಡನದಿ ಭಜನೆ ಗೈದು
ಬಾದರಾಯಣ ನುತ ದೇಹವೆ ಬೀಳಲಿ ||೨||
ದಾಸನಾಗುವ ಭಾಗ್ಯ ಕರುಣಿಸು ದೇವನೆ
ದಾಸದಾಸರ ಸೇವೆ ದೊರೆಯಲಿ ಸ್ವಾಮಿ
ಭಾಸುರಾಂಗ ತವ ಕೋಟಿ ಸೂರ್ಯಪ್ರಭ
ಹಾಸ ವದನ ತೋರೋ ದಾಸ ಕೇಶವ ನುತ ||೩||
0 ಕಾಮೆಂಟ್‌ಗಳು