ರಾಮಗಿಂತಧಿಕ ದೈವಗಳುಂಟೆ ಜಗದಿ - Ramagintadhika Daivagalunte Jagadi

|| ರಾಮ ಸ್ತುತಿ ||



ರಾಮಗಿಂತಧಿಕ ದೈವಗಳುಂಟೆ ಜಗದಿ

ಭಾಮಕವನು ಬಿಡಿರೋ ||ಪ||


ತಾ ಮರೆಯದೆ ಭಕ್ತಸ್ರೇಮಕೆ ಪ್ರೇಮದಿ

ಕಾಮಿತ ನೀಡುವ ಕರುಣಾಳು ಎನಿಸಿದ ||ಅ.ಪ.||



ಅಂದಾಂಜನೇಯನು ಬಂದು ಚರಣಕ್ಕೆರೆಗೆ

ಪ್ರೇಮ ಭರಿತಳಾತನಿಗೆ

ಸಂದೇಹವಿಲ್ಲದೆ ಬ್ರಹ್ಮಪದವಿಯನಿತ್ತೆ

ಇನ್ಯಾರ ಭಜಿಸಿ ಏನಪಡೆದಿಹರಯ್ಯ ||೧||


ಅರಿಯ ಸೋದರ ಬಂದು ಚರಣಕ್ಕೆರೆಗೆ

ಪ್ರೇಮ ಭರಿತಳಾತನಿಗೆ

ದೊರೆತನ ಕರುಣಿಸಿ ವರವ ನಿನ್ನಿಂದ ಪಡೆದ

ಗುರುತರ ಕರುಣಾಳು ಕುರುಹುಂಟೆ ಲೋಕದಿ ||೨||

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು