|| ರಾಮ ಸ್ತುತಿ ||
ರಾಗ : ಮಾಲಕಂಸ
ತಾಳ : ತ್ರಿ ತಾಳ
ರಾಮ ಪೂಜೆಗೆ ಅಣಿಯಾದರು
ಶ್ರೀ ಮುನಿ ರಾಘವೇಂದ್ರತೀರ್ಥರು ||ಪ||
ಶ್ರೀಮದಾನಂದ ಮುನಿಗಳು ಮೊದಲಾಗಿ
ಮಹಾ ಮುನಿ ಪುಂಗವರೆಲ್ಲರು
ಬ್ರಹ್ಮ ಕದಾರ್ಚಿತ ಮೂಲರಾಮ ಪದ
ನೇಮದಿ ಪೂಜಿಸಿದಾಕ್ಷಣ ನೆನೆದು ||೧||
ಸೂರಿ ಸುಧೀಂದ್ರರು ಹರಿಯಾಜ್ಞೆಯನು
ಶಿರಸಾವಹಿಸಿ ತುರಿಯಾಶ್ರಮ ನೀಡಲು
ಧರಿಸಿ ಧಂಡ ಕಾಷಾಯ ವಸನದಿ
ಪರಮಪುರುಷ ಪರಬ್ರಹ್ಮ ರೂಪ ರಘು ||೨||
ಸನಕ ಸನಂದನ ಶೌನಕಾದಿ ಘನ
ಹನುಮ ದೇವತಾ ಅನುದಿನ ಯಚಿಸಿದ
ಜಾನಕಿ ಪತಿ ರಘುರಾಮ ವಿಠಲನ್ನ
ಮನದಿ ಸ್ಮರಿಸುತಾನಂದವ ಪಡುತಾ ||೩||
0 ಕಾಮೆಂಟ್‌ಗಳು