ರಚನೆ - ಡಿ.ವಿ.ಜಿ.
![]() |
kannadabhajanlyrics.blogspot.com, DVG images, DV Gundappa images |
ವನ ಸುಮದೊಳೆನ್ನ ಜೀವನವು ವಿಕಸಿಸುವಂತೆ
ಮನವನನುಗೊಳಿಸು ಗುರುವೇ ಹೇ ದೇವ || ಪ ||
ಜನಕೆ ಸಂತಸವೀವ ಘನನು ನಾನೆಂದೆಂಬ
ಎಣಿಕೆ ತೋರದೆ ಜಗದ ಪೊಗಳಿಕೆಗೆ ಬಾಯ್ ಬಿಡದೆ||ಅ.ಪ.||
ಕಾನನದಿ ಮಲ್ಲಿಗೆಯು ಮೌನದಿಂಬಿರಿದು ನಿಜ
ಸೌರಭವ ಸೂಸಿ ನಲವಿಂ ತಾನೆಲೆಯ ಪಿಂತಿರ್ದು
ದೀನತೆಯ ತೋರಿ ಅಭಿಮಾನವನು
ತೊರೆದು ಕೃತಕೃತ್ಯತೆಯ ಪಡೆವಂತೆ ||೧||
ಉಪಕಾರಿ ನಾನು ಎನ್ನುಪಕೃತಿಯು
ಜಗಕೆಂಬ ವಿಪರೀತ ಮತಿಯನಳಿದು
ವಿಪುಲಾಶ್ರಯವನೀವ ಸುಫಲ ಸುಮಭರಿತ ಪಾ
ದಪದಂತೆ ನೈಜ ಮಾದೊಳೋಂ ಬಾಳ್ವವೊಲು ||೨||
0 ಕಾಮೆಂಟ್‌ಗಳು