ಶರಣು ಮಹಾಗಣಪತಿ ನಮಗೆ ನಿನ್ನದೇ ಸ್ತುತಿ - Sharanu Mahaganapathi

 || ಗಣಪತಿ ಸ್ತುತಿ ||



ಗಜಾನನಂ ಭೂತಗಣಾದಿ ಸೇವಿತಂ

ಕಪಿತ್ಥ ಜಂಭೂಫಲಸಾರ ಭಕ್ಷಿತಂ

ಉಮಾಸುತಂ ಶೋಕವಿನಾಶಕಾರಣಂ

ನಮಾಮಿ ವಿಘ್ನೇಶ್ವರ ಪಾದ ಪಂಕಜಂ 


ಶರಣು ಮಹಾಗಣಪತಿ ನಮಗೆ ನಿನ್ನದೇ ಸ್ತುತಿ 

ಅನುದಿನವು ಭಕ್ತರು ನಿನ್ನ ನಂಬಿ ಇರುವರು



ಗಜಮುಖದ ದೇವನೆ ನಿನಗೆ ವಂದನೆ 

ಭಕ್ತಿಯ ಸೇವೆಯಲಿ ಆರಾಧನೆ 

ಕಷ್ಟ ಪರಿಹಾರಕೆ ಮಾರ್ಗದರ್ಶಕ 

ಕಾಪಾಡು ಕರುಣಾಳು ವಿಘ್ನನಾಶಕ||2||



ಶರವು ಶಿವಾಲಯದ ತೆಂಕು ಧಿಕ್ಕಿನಲ್ಲಿ 

ದಿವ್ಯ ಮಹಾಗಣೇಶ ಅವತರಿಸಿದನಿಲ್ಲಿ 

ನಿತ್ಯವು ಎಡೆಬಿಡದೆ ನಾವು ವಂದಿಸೆ 

ಸಕಲ ಇಷ್ಟಾರ್ಥವ ಪರಿಪಾಲಿಸು||2||



ಪುಣ್ಯ ಪ್ರಸಾದವೆ ಪಂಚಕಜ್ಜಾಯ

ಮುಕ್ತಿಯನ್ನು ನೀಡುವ ಭಕ್ತಜನಪ್ರಿಯ

ಸತ್ಯ ಧರ್ಮದಿ ತೋರೋ ನಿನ್ನ ಮಾಯೆಯ

ಶಾಸ್ತ್ರೀ ಸುಪೂಜಿತ ಸಿದ್ಧಿವಿನಾಯಕ||3|| 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು