|| ಆರತಿ ಹಾಡು ||
ಆರತಿ ಬೆಳಗೀರೆ ಸೀತಾರಾಮರಿಗೆ
ಸಹಿತ ಲಕ್ಷ್ಮಣನಿಗೆ ಮಾರುತಿಗೆ
ರಾಮನವಮಿ ದಿವಸ ಪೂಜೆಯ ಮಾಡಿ
ಮಂಗಳಾರತಿ ಬೆಳಗಿರೆ
ಹೂಮಾಲೆಯ ಸಿಂಗರಿಸಿ ನೈವೇದ್ಯ ಒಪ್ಪಿಸಿ
ರಂಗೋಲಿ ಹಾಕಿ ದೀಪ ಬೆಳಗೀರೆ
ರಾಮದೇವರ ಪಾದಕಮಲಗಳಿಗೆ
ತುಪ್ಪದ ಆರತಿಬೆಳಗುವ
ಸೀತಾ ಸಹಿತ ಲಕ್ಷ್ಮಣ ಸಹಿತ ಮಾರುತಿಸಹಿತ ರಾಮನಿಗೆ
ತುಪ್ಪದ ಆರತಿ ಬೆಳಗುವ
ಚಂದದಿ ಅಲಂಕರಿಸಿ ಭಕ್ತಿಯಿಂದಪೂಜಿಸಿ
ಸುಖ ಸಂತೋಷ ಆರೋಗ್ಯ ಭಾಗ್ಯ
ಕರುಣಿಸಿ ಕಾಪಾಡಿ ನಮ್ಮನೆಂದು
ಮಂಗಳಾರತಿ ಬೆಳಗುವ
ಸೀತಾ ಸಹಿತ ಮಾರುತಿಸಹಿತ ಮಾರುತಿಸಹಿತ ರಾಮನಿಗೆ
ಮಂಗಳಾರತಿ ಬೆಳಗುವ
ಮಂಗಳಾರತಿಯ ಬೆಳಗೀರೆ
ತುಪ್ಪದಾರತಿಯ ಬೆಳಗೀರೆ
ಕುಂಕುಮದಾರತಿ ಬೆಳಗೀರೆ
ನವರತ್ನದಾರತಿ ಬೆಳಗೀರೆ
0 ಕಾಮೆಂಟ್‌ಗಳು