|| ಲಕ್ಷ್ಮಿ ಹಾಡು ||
ಬಾರೆ ಬಾರೆ ಲಕ್ಷ್ಮೀದೇವಿ ಅಂಗನಾಮಣಿ
ತೋರೆ ತೋರೆ ಮುದ್ದು ಮುಖವ ರಂಗನರಾಣಿ
ಯಾರೆ ಯಾರೆ ನಿನಗೆ ಸುಮರು ತ್ರಿಜಗಜ್ಜನನಿ
ತಾರೆ ತಾರೆ ಸಂತೃಪ್ತಿಯ ನೀಲವೇಣಿ
ಕಮಲಕರದಿ ಕಮಲ ಹಿಡಿದು ಬೇಗನೆ ಬಾರೆ
ಕಮಲಾಕ್ಷಿಯೆ ಕಮಲನಾಭನ ನೀ ಕರೆತಾರೆ
ಕಮಲವದನೆ ಮಂದಹಾಸ ಬೀರುತ ಬಾರೆ
ಕೋಮಲೆ ಗಜ್ಜೆ ಘಲ್ ಎನಿಸುತ ಬಾರೆ
ಕಾಮ ಕ್ರೋಧ ಮೋಹಗಳ ಬಿಡಿಸು ತಾಯೆ
ಶ್ಯಮನಂಘ್ರಯಲ್ಲಿ ಮನವ ನಿಲ್ಲಿಸು ಮಾಯೆ
ನಾಮ ರೂಪ ಗುಣ ಮಹಿಮೆ ತಿಳಿಸಿ ಕಾಯ
ರಾಮನರ್ಧಾಂಗಿಯೆ ಜಯದಾಯಕಿಯೆ
ಮಂಗಳ ದ್ರವ್ಯಗಳಿಂದ ಪೂಜಿಪೆ ಬಾರಮ್ಮ
ಮಂಗಳೆ ಅಲುಗಾಡದೆ ಮನದಲಿ ನಿಲ್ಲಮ್ಮ
ಮಂಗಳಾಂಗ ಸಿರಿಹರಿಯ ನೋಡುವ ನಮ್ಮಮ್ಮ
ಮಂಗದಂಥ ಮನ ತಿದ್ದಿ ಸಲಹು ಲಕ್ಷ್ಮಮ್ಮ
0 ಕಾಮೆಂಟ್‌ಗಳು