|| ಲಕ್ಷ್ಮಿ ಹಾಡು ||
ಅರವಿಂದಾಲಯೇ ತಾಯೆ ಶರಣು ಹೊಕ್ಕೇನು ಕಾಯೆ
ಶ್ರೀರಮಣನ ಪ್ರಿಯೆ ಜಗನ್ಮಾತೆ ||ಪ ||
ಕಮಲಾ ಸುಗಂಧಿಯೇ ಕಮಲಾದಳ ನೇತ್ರ
ಕಮಲಾ ವಿಮಲಾ ಶೋಭಿತೇ ||
ಕಮನೀಯ ಹಸ್ತಾ ಪಾದ ಕಮಲ ವಿರಾಜಿತೆ
ಕಮಲೆ ಕಾಯೆ ಎನ್ನನು ಶ್ರೀಲಕುಮಿಯೇ||೧||
ನಿನ್ನ ಕರುಣಾ ಕಟಾಕ್ಷ ವಿಕ್ಷಣದಿಂದಲಿ
ತನುಮನಗಳ ಏರಿತೆ ||
ಧನ್ಯ ವಿರಾಜಿತೆ ಅಜಭವಾದಿಗಳ
ಪ್ರಸನ್ನೇ ಕಾಯೆ ಎನ್ನನು ಶ್ರೀಲಕುಮಿಯೇ।।೨||
ಹರಿನಿನ್ನ ಪುರದಲ್ಲಿ ಧರಿಸಿದನೆಂಬಂತೆ
ಗರುವದಿ ಮರೆಯಲಿರೆ ||
ನಿರತ ನಿನ್ನಯ ಮುದ್ದು ಪುರಂದರವಿಠಲನ್ನ
ಚರಣಕಮಲವ ತೋರಿಸೇ ಶ್ರೀಲಕುಮಿಯೇ ||೩||
0 ಕಾಮೆಂಟ್‌ಗಳು