|| ಲಕ್ಷ್ಮಿ ಹಾಡು ||
ಭಾಗ್ಯಲಕ್ಷ್ಮಿ ಮನೆಗೆ ಬಂದಳು ಬಾಗಿಲು ತೆರೆಯಿರೋ
ಯೋಗ್ಯವಾದ ವರಗಳನ್ನು ಕರುಣಿಸೆನ್ನಿರೋ||ಪ||
ಹೇಮ ದೃಷ್ಟಿಯನ್ನು ಸುರಿಸಿ ತಾ ಹರಸುತ
ಕಮಲಗಳನು ಕರದಲ್ಲಿ ತಾ ಪಿಡಿಯುತ
ಕಮಲನಯನೆ ಕಾಮಿತಾರ್ಥಗಳನ್ನು ಸದಾ ನಮಗೆ ಕೊಟ್ಟು
ರಮೆಯು ಬಂದಳು ರಮಣನನ್ನು ಕೂಡಿ ನಲಿಯುತಾ ೧.
ಸುರರು ಸೇರಿ ಶರಧಿ ಮಥನವಾ ಮಾಡುತಿರಲು
ಶರಧಿ ಸುತೆಯು ಬಂದಳಮ್ಮ ಮುದ್ದು ಮುಖದಲಿ
ಪರನು ಹರಿಯು ಎಂದು ಸಾರುತ್ತಾಮಾಲೆ ಹಾಕಿದ
ಹರಿಯ ಕೂಡಿ ಬಂದ ಸಿರಿಯ ಕರೆಯ ಬನ್ನಿರಿ ೨.
ಹರಿಯ ನಾಮ ಸ್ಮರಿಪ ಜನರನ್ನು ಪೊರೆವೆನೆನ್ನುತಾ
ಪರಿ ಪರಿಯ ಸಿರಿಯನ್ನು ತಾ ಬೇಡುತಾ
ವರಹ ಹರಿ ವಿಠಲನ್ನ ಪ್ರೇಮದಲಿ ಪಾಡುವವಗೆ
ವರವ ಕರುಣಿಸುತ್ತ ಬಂದು ತಾನು ಅಲ್ಲಿ ನೆಲೆಸಿಹಳು ೩.

0 ಕಾಮೆಂಟ್ಗಳು